ಆಫ್ಘಾನಿಸ್ತಾನದಲ್ಲಿ ಹೆಚ್ಚಿದ ಆಂತರಿಕ ಪ್ರಕ್ಷುಬ್ಧತೆ | 100 ಮಂದಿ ತಾಲಿಬಾನ್ ಗಳನ್ನು ಹತ್ಯೆ ಮಾಡಿದ ಸೇನೆ

ಕಾಬೂಲ್, ಅಫ್ಘಾನಿಸ್ತಾನ : ಆಫ್ಘನ್ ಭದ್ರತಾ ಪಡೆಗಳು ನಡೆಸಿದ ಬೃಹತ್ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಅಪ್ಪನ್ ರಕ್ಷಣಾ ಸಚಿವಾಲಯ ತಿಳಿಸಿದೆ.

 

ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿದ್ದು, ಸುಮಾರು 50 ಕ್ಕು ಅಧಿಕ ತಾಲಿಬಾನ್ ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಸ್ಪೋಟಕಗಳನ್ನು, ಇತರ ಸ್ಪೋಟಕಗಳನ್ನು ನಾಶಪಡಿಸಲಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಅಫ್ಘಾನಿಸ್ತಾನದ ಲಾಗನ್, ಕುನಾರ್, ನಂಗರ್ಹಾರ್, ಘಜಿ, ಪಕ್ತಿಯಾ, ಮೈದಾನ್ ವಾರ್ಡಾಕ್, ಖೋಸ್ಟ್, ಜಾಬುಲ್, ಬಗ್ಗಿಸ್, ಹೆರಾತ್, ಫರಿಯಾಬ್, ಹೆಲ್ಮಾಂಡ್ ಮತ್ತು ಬಾಗ್ಲಾನ್ ಪ್ರಾಂತ್ಯಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Leave A Reply

Your email address will not be published.