ಪ್ರಿಪೇರ್ ಎಜುಟೆಕ್ App ಬಿಡುಗಡೆ: ಕನ್ನಡ ವಿದ್ಯಾರ್ಥಿಗಳಿಗೆ ಹೊಸ ಆಶಾಕಿರಣ

ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ ಕಷ್ಟಪಡುವುದುಂಟು. ಈ ಲೆಕ್ಚರರ್ ಕನ್ನಡದಲ್ಲಿ ಒಂದೂ ವರ್ಡ್ ಹೇಳೋದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು.

ಕನ್ನಡ ವಿದ್ಯಾರ್ಥಿಗಳೇ ಭಯಬೇಡ

ಆರಂಭಿಕ ಶಿಕ್ಷಣದಲ್ಲಿ ಮೊದಲ ಮತ್ತು ಎರಡನೇಯ ಭಾಷೆಯಾಗಿ ಕನ್ನಡವನ್ನು ಓದಿರುವ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿರುವ ಕೋರ್ಸ್‌ಗಳು, ಅಲ್ಲಿರುವ ಪದಪುಂಜಗಳು ಅರ್ಥವಾಗದೆ ಪರಿತಪಿಸುತ್ತಾರೆ. ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ಕೇರ್ನ ಇಂತಹ ಕಷ್ಟದ ವಿಷಯಗಳನ್ನು ಕನ್ನಡದಲ್ಲಿ, ಕಂಗ್ಲಿಷ್ನಲ್ಲಿ ಯಾರಾದರೂ ಹೇಳಿಕೊಡುವಂತೆ ಇದ್ದರೆ…. ಎಂದು ಸಾಕಷ್ಟು ವಿದ್ಯಾರ್ಥಿಗಳು ಆಲೋಚಿಸುತ್ತಿರಬಹುದು. ಇಂತಹ ಸಾಹಸಕ್ಕೆ ಬಾಗಲಕೋಟೆಯ ಜನಪ್ರಿಯ ವೈದ್ಯರೊಬ್ಬರು ಕೈಹಾಕಿದ್ದಾರೆ. ಬಾಗಲಕೋಟೆಯ ಜನಪ್ರಿಯ ನೆಪ್ರೊಲಜಿಸ್ಟ್ ಡಾ. ಸಂದೀಪ್ ಹುಯಿಲಗೋಳ ಅವರ, ಒಂದಿಷ್ಟು ಸಮಾನಾಸಕ್ತ ಪರಿಣಿತರನ್ನು ಒಟ್ಟಾಗಿಸಿ ಕನ್ನಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ Preped ಸ್ಟಾರ್ಟಪ್ ಆರಂಭಿಸಿದ್ದಾರೆ. ಪ್ರಿಪೆಡ್‌.ಇನ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ

ಸ್ಟಾರ್ಟಪ್ ಹಿಂದಿನ ಕಾಳಜಿ

ಒಳ್ಳೆಯ ಭವಿಷ್ಯ ಪಡೆಯುವುದು ಎಲ್ಲರ ಕನಸು. ಆದರೆ, ಕೆಲವೊಮ್ಮೆ ಇಂತಹ ಕಷ್ಟದ ಇಂಗ್ಲಿಷೇ ಭೂತವಾಗಿ ಕಾಡುವುದುಂಟು. ಕೆಲವೊಮ್ಮೆ ಸಾಕಷ್ಟು ಪ್ರತಿಭೆ ಇರುವ ಗ್ರಾಮೀಣ ಪ್ರತಿಭೆಗಳು ಈ ಇಂಗ್ಲಿಷ್‌ನಿಂದಾಗಿ ಬದಿಗೆ ಸರಿಯುವುದುಂಟು. ಮುಖ್ಯವಾಗಿ ಆರೋಗ್ಯ ಸೇವಾ ವಲಯದಲ್ಲಿ ಈ ರೀತಿ ಆದರೆ ಒಳ್ಳೆಯ ಸೇವೆ ಜನರಿಗೆ ದೊರೆಯುವುದು ಕಷ್ಟವಾಗುತ್ತದೆ. ಆದರೆ, ಕಲಿಯಲು ಆಸಕ್ತಿ ಉಳ್ಳವರಿಗೆ ಭಾಷೆ ಅಡ್ಡಿಯಾಗಬಾರದು ಎನ್ನುವುದು ಡಾ. ಸಂದೀಪ್ ಹುಯಿಲಗೋಳ ಅವರ ಕಾಳಜಿ.

ಶೈಕ್ಷಣಿಕ ಹಬ್ ಆದ ಬಾಗಲಕೋಟೆಯಲ್ಲಿ ಡಾ. ಸಂದೀಪ್ ಅವರು ಕನ್ನಡ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಬೋಧಿಸುವ ವಿಶೇಷ ಸೇವೆ ಪರಿಚಯಿಸಿದ್ದಾರೆ. ಇವರ ಈ Preped ಸ್ಟಾರ್ಟಪ್‌ಗೆ ಹಲವು ಜನರು ಕೈ ಜೋಡಿಸಿದ್ದು, ಶೀಘ್ರದಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಈ ಸೇವೆ ಕೇವಲ ಬಾಗಲಕೋಟೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ದೊರಕಬೇಕು ಎಂಬ ಕಾಳಜಿಯಿಂದ ಇದಕ್ಕಾಗಿ ವಿಶೇಷ ಆನ್ಲೈನ್ ಕೋರ್ಸ್ಗಳನ್ನು ಆರಂಭಿಸಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಈ ಕೋರ್ಸ್‌ಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗಿದೆ.ಅಂದರೆ ಕೆಲವು ನೂರು ರೂಪಾಯಿ ಮೊತ್ತಕ್ಕೆ ಕೋರ್ಸ್‌ಗಳು ಲಭ್ಯವಿದೆ.. ಇದಕ್ಕಾಗಿ ಇವರಿಗೆ ಮತ್ತು ಇವರ ತಂಡಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಇದಕ್ಕಾಗಿ App ಹೊರತಂದಿದ್ದು,, ವಿದ್ಯಾರ್ಥಿಗಳು ತಮ್ಮ smartphone ಮೂಲಕವೇ ಕಲಿಯಬಹುದು.

Preped ವಿಶೇಷತೆಗಳೇನು?

•  ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಗೆ ಸಂಬಂಧಪಟ್ಟ ಕೋರ್ಸ್ಗಳನ್ನು ಅತ್ಯಂತ ಕಡಿಮೆ ಶುಲ್ಕದಲ್ಲಿ ಕಲಿಯುವ ಅವಕಾಶ. (ಕೇವಲ 300 ರೂ, 500 ರೂ. ಗೆ ಇಂತಹ ಕೋರ್ಸ್ಗೆ ಸೇರಬಹುದಾಗಿದೆ).

•    ಕನ್ನಡ ವಿದ್ಯಾರ್ಥಿಗಳನ್ನುಗಮನದಲ್ಲಿಟ್ಟುಕೊಂಡು ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಸಬ್ಜೆಕ್ಟ್ಗಳನ್ನು ಅತ್ಯಂತ ಸರಳವಾಗಿ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ.

•   ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಬೇಕುಎನ್ನುವುದು preped.in ಕಾಳಜಿ. ಈ ವಿಶೇಷ ಕೋರ್ಸ್ಗಳಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್ಕೇರ್ ಕೋರ್ಸ್ಗಳನ್ನು ಅತ್ಯಂತ ಸುಲಭವಾಗಿ ಪಾಸ್ ಆಗಬಹುದು.

•   Preped. ಇನ್ ವೆಬ್ ಮತ್ತು ಆಪ್‌ನಲ್ಲಿ ೫೦೦ಕ್ಕೂ ಹೆಚ್ಚು ವಿಡಿಯೋ ಲೆಕ್ಚರರ್ಗಳನ್ನು ಅಪ್ಲೋಡ್ ಮಾಡಲಾಗಿದೆ. ಸ್ಥಳೀಯ ಭಾಷೆಯಲ್ಲಿ ಬೋಧಕರು ಬೋಧಿಸುವುದು ಇದರ ವಿಶೇಷ. ಮುಖ್ಯವಾಗಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಕಲಿಯಲು ಸಾಧ್ಯವಾಗಲಿದೆ. ಶೀಘ್ರದಲ್ಲಿ ಕೋರ್ಸ್‌ಗಳನ್ನು ಕಲಿಯಬಹುದು.

•     ೧೦ನೇ ತರಗತಿ ಬಳಿಕದ ನರ್ಸಿಂಗ್, ಪ್ಯಾರಮೆಡಿಕಲ್, ಅಲೈಡ್ ಹೆಲ್ತ್‌ಕೇರ್‌ ವಿಷಯಗಳನ್ನುಕಲಿಯಬಹುದು.

ಸೂಪರ್ ಆಗಿದೆ ಅಲ್ವ ಸ್ನೇಹಿತರೇ, ನೀವು ವಿದ್ಯಾರ್ಥಿಯಾಗಿದ್ದರೆ ಈಗಲೇ ಪ್ರಿಪೇರ್‌.ಇನ್‌ಗೆ ಪರಿಶೀಲಿಸಿರಿ.ಈಗಲೇ ಈ ಮಾಹಿತಿಯನ್ನು, ಲೇಖನದ ಲಿಂಕ್‌ ಅನ್ನು ಸೇವ್‌ ಮಾಡಿಟ್ಟುಕೊಳ್ಳಿ. ಮುಂದೊಂದು ದಿನ ಅಗತ್ಯಬಿದ್ದಾಗ ಮಾಹಿತಿ ಹುಡುಕುವುದು ಸುಲಭವಾಗಲಿದೆ. ಎಲ್ಲಾದರೂ ಈ ಲೇಖನ ಓದುತ್ತಿರುವುದು ವಿದ್ಯಾರ್ಥಿಗಳ ಹೆತ್ತವರು, ಪೋಷಕರು ಆಗಿದ್ದರೆ ಖಂಡಿತವಾಗಿಯೂ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಪ್ರಿಪೇರ್ ಎಜುಟೆಕ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ.

ಪ್ರಿಪೇರ್ ಎಜುಟೆಕ್ ವೆಬ್ಸೈಟ್  ನೋಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಿಪೇರ್ ಎಜುಟೆಕ್ ಅವರ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ.

ಪ್ರಿಪೆಡ್‌.ಇನ್‌ App ಡೌನ್‌ಲೋಡ್‌ ಮಾಡಿಕೊಳ್ಳಿ

(ಪ್ರಾಯೋಜಿತ ಬರಹ)

Leave A Reply

Your email address will not be published.