‘ ಹೀರೋ ಜತೆ ಮಲಗು, ಆಗ ನೀ ಹೀರೋಯಿನ್ ಗ್ಯಾರಂಟಿ ‘ | ಬಾಲಿವುಡ್ ನಟಿ ಕಿಷ್ವರ್ ಮರ್ಚಂಟ್ ಗೆ ಅಫರ್ !

ಮತ್ತೆ ಕಾಸ್ಟಿಂಗ್ ಕೌಚ್ ನ ಹಳೆಯ ವಿಷಯವೊಂದು ಹೊರಕ್ಕೆ ಬಂದಿದೆ. ಸಿನಿ ಜಗತ್ತಿನಲ್ಲಿ ಕಾಸ್ಟಿಂಗ್ ಕೌಚ್ ನ ಬಗ್ಗೆ ಮಾತಾಡಿದವಳು ಬಾಲಿವುಡ್ ನ ನಟಿ ಕಿಶ್ವರ್ ಮರ್ಚೆಂಟ್.

 

ನಿರ್ಮಾಪಕರೊಬ್ಬರು ಚಿತ್ರದಲ್ಲಿ ನಟಿಸುವ ಅವಕಾಶ ಬೇಕು ಎಂದರೆ ಹೀರೋ ಜತೆ ಮಲಗಲು ಹೇಳಿದ್ದರು ಎಂದು ನಟಿ ಕಿಶ್ವರ್ ಮರ್ಚೆಂಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ಎಕಾನಮಿಕ್ ಟೈಂಸ್ ನೌ ಸುದ್ದಿ ಸಂಸ್ಥೆಯೊಂದಿಗೆ ನಡೆದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ನ ಸಮಯದಲ್ಲಿ ನಡೆದ ಅಹಿತಕರ ಘಟನೆಯನ್ನು ಆಕೆ ವಿವರಿಸಿ ದ್ದಾಳೆ. ಯಾವುದೋ ಒಂದು ದೊಡ್ಡ ಬ್ಯಾನರಿನ ದೊಡ್ಡ ನಿರ್ಮಾಪಕರು ಆಕೆಯನ್ನು ಡಿಸ್ಕಶನ್ ಎಂದು ಕರೆದಿದ್ದರು. ಆಕೆ ತನ್ನ ತಾಯಿಯ ಜೊತೆ ಅಲ್ಲಿಗೆ ಹೋಗಿದ್ದಳು.

ಆಗ ಆ ನಿರ್ಮಾಪಕರು ನೀನು ಈ ಹೀರೋನೊಂದಿಗೆ ಮಲಗು. ಆಗ ನಿನಗೆ ಚಿತ್ರದಲ್ಲಿ ಅವಕಾಶ ದೊರೆಯುತ್ತದೆ ಎಂದಿದ್ದರಂತೆ. ಆಗ ಈಕೆ ಆ ಸಿನಿಮಾದ ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿ ಹೊರಟುಬಂದೆ ಎಂದು ಆಕೆ ತಿಳಿಸಿದ್ದಾರೆ. ಇದು ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಅವಕಾಶಕ್ಕಾಗಿ ಇದೇ ಟೆಕ್ನಿಕ್ ಅನ್ನು ಬಳಸಲಾಗುತ್ತಿದೆ ಎಂದು ಆಕೆ ಹೇಳಿದ್ದಾಳೆ.

ಸದ್ಯ ಆಕೆ ತನ್ನ ಪತಿ ಮತ್ತು ಗಾಯಕ ಸುಯಾಶ್ ರಾಯ್ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿರುವ ಕೀಶ್ವರ್ ಮರ್ಚೆಂಟ್, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಕಾವ್ಯಾಂಜಲಿ, ಏಕ್ ಹಸೀನಾ ಥಿ ಮತ್ತು ಕಹಾನ್ ಹಮ್ ಕಹಾನ್ ತುಮ್ ಹಲವು ಕಾರ್ಯಕ್ರಮಗಳಲ್ಲಿ ನಟಿ ಕಿಶ್ವರ್ ಕಾಣಿಸಿಕೊಂಡಿದ್ದಳು.

ಕಾಸ್ಟಿಂಗ್ ಕೌಚ್ ಎಂಬ ಅವಕಾಶಕ್ಕಾಗಿ ಮಲಗು ಸಂಸ್ಕೃತಿಯ ಬಗ್ಗೆ ದನಿಯೆತ್ತುವ ಹೆಣ್ಣುಮಕ್ಕಳು, ತಾವು ಬಹುತೇಕ ವೃತ್ತಿ ಜೀವನದಿಂದ ರಿಟೈರ್ಡ್ ಆದಮೇಲೆ ಅದರ ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದುವೇಳೆ ಹೇಳಿಕೊಂಡರು ಕೂಡಾ, ತಮಗೆ ಮಂಚದ ಆಗರ್ ನೀಡಿದ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸದೆ ಇರುವುದು ಕಾಸ್ಟಿಂಗ್ ಕೌಚ್ ಚಿತ್ರರಂಗದಲ್ಲಿ ಮತ್ತಷ್ಟು ಮುಂದುವರಿಯಲು ಅವಕಾಶ ಮಾಡಿಕೊಡುತ್ತಿದೆ.

Leave A Reply

Your email address will not be published.