ಪತಿಯ ಮೊಬೈಲ್ ಕದ್ದು ನೋಡಿ ಚೆಕ್ ಮಾಡುವ ಹೆಂಡತಿಯರಿಗೆ ಕಾದಿದೆ ದೊಡ್ಡ ಶಿಕ್ಷೆ !

ಇದು ಪತಿಯ ಮೊಬೈಲ್ ಅನ್ನು ಕದ್ದು ನೋಡುವ ಪತ್ನಿಯರಿಗೆ ಒಂದು ದೊಡ್ಡ ವಾರ್ನಿಂಗ್. ಮೊಬೈಲಿನಲ್ಲಿ ಸಾಕಷ್ಟು ಗುಟ್ಟು ರಟ್ಟುಗಳನ್ನು ಗುಪ್ತವಾಗಿ ಹೊಂದಿರುವ ಪತಿಯರ ಪಾಲಿಗೆ ಒಂದು ಗುಡ್ ನ್ಯೂಸ್ !
ಯೆಸ್, ಪತಿಯ ಮೊಬೈಲನ್ನು ಕದ್ದು ನೋಡಿದ ಕಾರಣಕ್ಕಾಗಿ ಪತ್ನಿಯೊಬ್ಬಳ ಮೇಲೆ ದುಬಾಯಿನ ಕೋರ್ಟು0ದು ದೊಡ್ಡ ಮೊತ್ತದ ದಂಡ ವಿಧಿಸಿದೆ.
ನನ್ನ ಪತ್ನಿ ನನ್ನ ಮೊಬೈಲ್ ತೆರೆದು ನೋಡಿದಲ್ಲದೆ ಅದರಲ್ಲಿರುವ ಕೆಲವು ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ನನ್ನ ಕುಟುಂಬಕ್ಕೆ ಕಳುಹಿಸಿ ನನ್ನನ್ನು ಅವಮಾನಿತನಾಗಿ ಮಾಡಿದ್ದಾಳೆ. ಆದುದರಿಂದ ನಾನು ಆಕೆಯ ಮೇಲೆ ಕೇಸು ಹಾಕಬೇಕಾಯಿತು. ಈ ಸಂದರ್ಭದಲ್ಲಿ ನನಗೆ ತುಂಬಾ ಒತ್ತಡ ಬಂದಿದ್ದು ಮಾನಸಿಕವಾಗಿ ನಾನು ಜರ್ಜರಿತನಾಗಿದ್ದೇನೆ. ಕೆಲವು ಸಮಯದಲ್ಲಿ ಕೋರ್ಟು-ಕಚೇರಿ ಕಾರಣದಿಂದ ಕೆಲಸಕ್ಕೂ ಹಾಜರಾಗಲು ಆಗಿಲ್ಲ. ಆದುದರಿಂದ ನನಗೆ ಪರಿಹಾರ ದೊರಕಿಸಿ ಕೊಡಬೇಕೆಂದು ರಸ್ ಅಲ್ ಖೈಮಾ ಎಂಬಾತ ಕೋರ್ಟಿನ ಮೊರೆ ಹೋಗಿದ್ದ.
ಇದೀಗ ದೊಡ್ಡ ಮನಸ್ಸಿನ ಅಲ್ಲಿನ ಕೋರ್ಟು ಆತನ ನೋವಿಗೆ ಸ್ಪಂದಿಸಿದೆ. ಕದ್ದು ನೋಡುವ ಹೆಂಡತಿಯರಿಗೆ ಪಾಠ ಕಲಿಸಲು ಆ ಪುರುಷ ನ್ಯಾಯಾಧೀಶರು ನಿರ್ಧರಿಸಿದ್ದಾರೆ !!!
ಅಂತೆಯೇ ಆತನ ಪತ್ನಿಗೆ 5430 ದಿನಾರ್ ಅಂದರೆ, ಭಾರತದ ರೂಪಾಯಿಗಳಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಮೊತ್ತವನ್ನು ಈಗ ಪತ್ನಿ ಗಂಡನಿಗೆ ನೀಡಬೇಕಾಗಿದೆ : ಪತಿಯ ಮೊಬೈಲ್ ಗೆ ಕಣ್ಣಾಡಿಸಿದ ಮತ್ತು ಕೈಯಾಡಿಸಿದ ಕಾರಣಕ್ಕಾಗಿ!!
ಇನ್ನಾದರೂ ಪತಿ ಪತ್ನಿ ಇಬ್ಬರು ಕೂಡ ಎಚ್ಚರದಲ್ಲಿ ಇದ್ದರೆ ಸಾಕು. ಇನ್ನು ಪತಿಯರ ಮೊಬೈಲ್ ಗೆ ಲಾಕ್ ಬೇಡ. ಹೆಂಡತಿ ನಿಮ್ಮ ಮೊಬೈಲ್ ಮುಟ್ಟಿದರೆ ತೆರ ಬೇಕಾದೀತು ಲ್ಯಾಕ್ಸ್. ರಿಲ್ಯಾಕ್ಸ್ ಬ್ರೋ !!