ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿಲ್ಲ – ಡಿಸಿ ಸ್ಪಷ್ಟನೆ

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆಗೊಂಡಿಲ್ಲ, ಸದ್ಯಕ್ಕೆ ಈಗಿನ ಮಾರ್ಗಸೂಚಿಯೇ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ತಿಳಿಸಿದ್ದಾರೆ.

 

ದ.ಕ.ಜಿಲ್ಲೆಯಾದ್ಯಂತ ಕೆಲವು ನಿರ್ಬಂಧಗಳೊಂದಿಗೆ ಹೊಸ ಮಾರ್ಗಸೂಚಿ ಜಾರಿಯಾಗುತ್ತದೆ.

ವಾರದಲ್ಲಿ ಎರಡು ದಿನ ಮಾತ್ರ ಸಾಮಾಗ್ರಿ ಖರೀದಿಗೆ ಅವಕಾಶ ನೀಡಲಾಗುತ್ತದೆ. ಮೇ.24 ರ ಬಳಿಕ ಮದುವೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಎಂದು ಈ ಸಾಧ್ಯತೆಯ ಕುರಿತು ಏಷ್ಯನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರಗೊಂಡಿತ್ತು.ಇದನ್ನೇ ಆಧಾರವಾಗಿ ಹೊಸಕನ್ನಡದಲ್ಲೂ ವರದಿ ಪ್ರಕಟಮಾಡಲಾಗಿತ್ತು.

ಆದರೆ ಇದೀಗ ಆ ಗೊಂದಲಕ್ಕೆ ತೆರೆ ಬಿದಿದ್ದು, ವೈರಲ್ ಆಗುತ್ತಿರುವ ಆ ವರದಿಯ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಅವರೇ ಸ್ಟಷ್ಟನೆ ನೀಡಿದ್ದು, ಅದು ತಪ್ಪು ಮಾಹಿತಿ ’ ಎಂದು ಡಾ.ರಾಜೇಂದ್ರ ಕೆ.ವಿ. ಅವರು ಹೇಳಿದ್ದಾರೆ.

Leave A Reply

Your email address will not be published.