‘ಸೆಕ್ಸ್ ಗಾಗಿ ಅರ್ಜೆಂಟಾಗಿ ಮನೆಯಿಂದ ಆಚೆ ಹೋಗಬೇಕು’ ಬೇಗ ಇ- ಪಾಸ್ ಕೊಡಿಸಿ ಎಂದು ಆತ ಪೊಲೀಸರನ್ನು ಕೇಳಿದ್ದ

ಕೊರೊನಾದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಮಾಡಿದ್ದರೆ, ಕೆಲವು ರಾಜ್ಯಗಳಲ್ಲಿ ತುರ್ತು ಸಂಧರ್ಭಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಇ-ಪಾಸ್ ನೀಡಲಾಗುತ್ತಿದೆ.

ಅದೇ ರೀತಿ ಕೇರಳದಲ್ಲಿ ಕೂಡ ತುರ್ತು ಓಡಾಟಕ್ಕೆ ಇ-ಪಾಸ್ ಕಡ್ಡಾಯ ಮಾಡಲಾಗಿದೆ. ಸಾರವಜನಿಕರು ತುರ್ತಾಗಿ ಒಂದು ಕಡೆಯಿಂದ ಇನ್ನೊಂದೆಡೆ ಹೋಗಬೇಕಾದಾಗ ಪೊಲೀಸ್ ಇಲಾಖೆಯಿಂದ ಇ- ಪಾಸ್ ಪಡೆದುಕೊಳ್ಳುವುದು ಅನಿವಾರ್ಯ. ಅದಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಎಷ್ಟು ಅಗತ್ಯ ಎಂಬ ಬಗ್ಗೆ, ಎಮರ್ಜೆನ್ಸಿ ಏಕೆ ಇದೆ ಎಂಬ ಬಗ್ಗೆ ಅರ್ಜಿಯಲ್ಲಿ ವಿಷಯ ತಿಳಿಸಬೇಕು.

ಏನೇನೋ ಎಮರ್ಜೆನ್ಸಿ ಕಾರಣ ಹೇಳಿಕೊಂಡು ಸಹಸ್ರಾರು ಅರ್ಜಿಗಳನ್ನು ಪೊಲೀಸ್ ಇಲಾಖೆಗೆ ಬರುತ್ತಿವೆ. ಅವುಗಳಲ್ಲಿ ಕೆಲವು ನಿಜವಾಗಿಯೂ ಸತ್ಯವಾದ, ಜೆನ್ಯುನ್ ಕಾರಣಗಳು. ಮತ್ತೆ ಕೆಲವು ಸುಳ್ಳಿನ ಕಂತೆಗಳು.
ಮೊನ್ನೆ ಕೇರಳದ ಕನ್ನೂರು ಪೊಲೀಸರು ಇ-ಪಾಸ್‌ಗೆ ಹೀಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಅರ್ಜಿದಾರ ಬರೆದ ಕಾರಣ ಕೇಳಿ ಪೊಲೀಸರು ಸುಸ್ತಾಗಿದ್ದರು. ಏಕೆಂದರೆ ಅದರಲ್ಲಿ “ನಾನು ಸೆಕ್ಸ್ ಗಾಗಿ ಅರ್ಜೆಂಟ್ ಆಗಿ ಮನೆಯಿಂದ ಆಚೆ ಬರಬೇಕು. ದಯವಿಟ್ಟು ಅನುಮತಿ ಕೊಡಿ” ಎಂದಾತ ಮನವಿ ಮಾಡಿದ್ದ….!

ಇದನ್ನು ನೋಡಿದ ಪೊಲೀಸರಿಗೆ ಈ ಘಟನೆಯ ಬಗ್ಗೆ ನಗು ಮತ್ತು ಸಿಟ್ಟು ಏಕಕಾಲಕ್ಕೆ ಬಂದಿತ್ತು. ಅಲ್ಲದೆ, ಸೆಕ್ಸ್ ಹಾಗಿ ಹೊರಗೆ ಹೋಗಬೇಕು ಅಂದವನ ಮೇಲೆ ಡೌಟ್ ಬಂದಿತ್ತು. ಸೆಕ್ಸ್ ಗಾಗಿ ತನ್ನ ಮನೆಗೆ ಹೋಗಬೇಕು ಅಂದರೆ ಒಂದು ಅರ್ಥವಿತ್ತು. ಹೊರಗೆ ಹೋಗಬೇಕು ಎಂದ ಪಾರ್ಟಿಯ ಉದ್ದೇಶ ಪೊಲೀಸರಿಗೆ ಖಚಿತವಾಗಿರಲಿಲ್ಲ. ಸಂಕಷ್ಟ ಕಾಲದಲ್ಲಿ ಪೊಲೀಸರ ಸಮಯ ವ್ಯಯಮಾಡುವ ಇಂತಹ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದುಕೊಂಡ ಪೊಲೀಸರು ಆತನನ್ನು ತಮ್ಮಲ್ಲಿಗೆ ಕರೆಸಿಕೊಂಡಿದ್ದಾರೆ.

ತನಗೆ ಇ-ಪಾಸ್ ಸಿಗುತ್ತದೆ ಎಂಬ ಖುಷಿಯಲ್ಲಿ ಅರ್ಜಿದಾರ ಲಗುಬಗನೆ ಬಂದಿದ್ದ. “ಇಂಥ ಸೀರಿಯಸ್ ಸಮಯದಲ್ಲಿ ಇದೆಂಥ ಕಿಡಿಗೇಡಿತನ ನಿಂದು” ಎಂದು ಪೊಲೀಸರು ಆತನನ್ನು ಗದರಿದ್ದಾರೆ. ಮೊದಮೊದಲು ಆತನಿಗೆ ಪೋಲೀಸರು ಏನು ಹೇಳುತ್ತಿದ್ದಾರೆ ಎಂದು ಅರ್ಥವೇ ಆಗಿಲ್ಲ.

ಆಮೇಲೆ ಪೊಲೀಸರು ಆತ ಬರೆದಿದ್ದ ಈ ಮೇಲ್ ಅನ್ನು ಅವನಿಗೆ ತೋರಿಸಿದಾಗ ಆ ವ್ಯಕ್ತಿ ಅಯ್ಯೋ ಇದು ನಾನೇ ಸ್ವತಃ ಬರೆದದ್ದು, ಆದರೆ ಸೆಕ್ಸ್ ಅಂತ ಬರೆದೇ ಇಲ್ಲ ಅಂದಿದ್ದಾನೆ.
ಆಮೇಲೆ ಆತನ ಈ ಮೇಲ್ ಕಂಟೆಂಟ್ ಅನ್ನು ಅವನಿಗೆ ತೋರಿಸಿದಾಗ ಆ ವ್ಯಕ್ತಿ, “ಅಯ್ಯೋ ಸಾರ್, ಇದು ನಾನೇ ಟೈಪ್ ಮಾಡಿದ್ದು, ಆದರೆ ನನಗೆ ಸೆಕ್ಸ್ ಮಾಡುವ ಉದ್ದೇಶವಿರಲಿಲ್ಲ ಎಂದಿದ್ದಾನೆ. ನನಗೆ “ಸಿಕ್ಸ್ ಒ ಕ್ಲಾಕ್” (ಆರು ಗಂಟೆಗೆ) ಹೊರಡಲು ಪಾಸ್ ಬೇಕಿತ್ತು. ಸಿಕ್ಸ್ ಬದಲು ಅರ್ಜೆಂಟ್ ಆಗಿ ಬರೆದಾಗ ಅದು ಸೆಕ್ಸ್ ಎಂದಾಗಿದೆ. ನಾನು ತರಾತುರಿಯಲ್ಲಿ ನೋಡದೇ ಹಾಗೆಯೇ ಕಳಿಸಿಬಿಟ್ಟೆ. ನನಗೆ ಪಾಸ್ ತುರ್ತಾಗಿ ಬೇಕಿದೆ ಎಂದು ಪೊಲೀಸರ ಎದುರು ಗೋಗರೆದಿದ್ದಾನೆ. ನಂತರ ಆತ ಹೇಳುತ್ತಿರುವುದು ಸತ್ಯ ಎಂದು ಕನ್ಫರ್ಮ್ ಮಾಡಿಕೊಂಡ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ. ಅರ್ಜೆಂಟ್ ಗೆ ಬರೆದ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿತ್ತು.

Leave A Reply

Your email address will not be published.