ಕರ್ನಾಟಕದ ಜನಸಂಖ್ಯೆಯ 2.7 % ಜನ ಈವರೆಗಿನ ಒಟ್ಟು ಸೋಂಕಿತರು | ಪ್ರತಿ 100 ಸೋಂಕಿತರಿಗೆ 1 ಸಾವಾಗಿದೆ ಎನ್ನುತ್ತದೆ ಅಂಕಿಸಂಖ್ಯೆ !!
ನಿನ್ನೆ ಒಂದೇ ದಿನ ರಾಜ್ಯದಲ್ಲಿ 500 ಕ್ಕೂ ಅಧಿಕ ಮಂದಿ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್‌ನಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ 20,000 ದಾಟಿದೆ.
ರಾಜ್ಯದ ಬುಧವಾರದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 39,998 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿರುವವರ ಇದುವರೆಗಿನ ಸಂಖ್ಯೆ 20,53,191ಕ್ಕೆ ತಲುಪಿದೆ.
ಕರ್ನಾಟಕದಲ್ಲಿ ಸೋಂಕು ಮತ್ತು ಸಾವಿನ ಅಂಕಿಸಂಖ್ಯೆ
ಅಂದರೆ ಕರ್ನಾಟಕದ ಜನಸಂಖ್ಯೆಯ 2.5 ಪ್ರತಿಶತಕ್ಕಿಂತಲೂ ಹೆಚ್ಚು ಜನ ಕೊರೋನಾ ಸೋಂಕಿತರಾಗಿದ್ದಾರೆ. ಸೋಂಕಿಗೆ ಈವರೆಗೆ ಒಳಗಾದವರಲ್ಲಿ ಪ್ರತಿಶತ 1 ಪರ್ಸೆಂಟ್ ಜನರು ಮೃತಪಟ್ಟಿದ್ದಾರೆ. ಅಂದರೆ 100 ಜನರಿಗೆ ಸೋಂಕು ತಗುಲಿದರೆ ಅದರಲ್ಲಿ ಒಬ್ಬ ವ್ಯಕ್ತಿ ಮತ್ತು ಸಾವಿಗೀಡಾಗುವ ಸಂಭವ ಎನ್ನುವುದು ಅಂಕಿಅಂಶ ನೀಡುವ ಮಾಹಿತಿ.
ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 5,92,182. ಇನ್ನು ಒಟ್ಟಾರೆ ಸೋಂಕಿತರ ಪೈಕಿ ಇದುವರೆಗೆ 14,40,621 ಮಂದಿ ಗುಣಮುಖರಾಗಿದ್ದು, ಕಳೆದ 24 ಗಂಟೆಗಳಲ್ಲೇ 34,752 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ.
ಆದರೆ ಬುಧವಾರ ಒಂದೇ ದಿನ 517 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಸೋಂಕಿನಿಂದಾಗಿ 20,368 ಮಂದಿ ಸಾವಿಗೀಡಾಗಿದ್ದಾರೆ.