ಮದುವೆಗೆ ಇಲ್ಲಿ ಇನ್ನು ಕೇವಲ ಜನ ಮಾತ್ರ ಭಾಗವಹಿಸಬಹುದು !
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ನಲ್ಲಿ ಜಾರಿಯಲ್ಲಿ ಇರುವ ಕಠಿಣ ನಿರ್ಬಂಧ ಕ್ರಮಗಳನ್ನು ಮತ್ತೆ ವಿಸ್ತರಿಸಲಾಗಿದೆ. ಮೇ 27ರ ತನಕ ಈ ನಿರ್ಬಂಧ ಜಾರಿಯಲ್ಲಿ ಇರಲಿದೆ. ಹೊಸ ಮಾರ್ಗ ಸೂಚಿ ಅತ್ಯಂತ ಕಠಿಣವಾಗಿದೆ. ಇಲ್ಲಿ ಏಪ್ರಿಲ್ 22 ರಂದು ಮೊದಲ ಬಾರಿಗೆ ಜಾರ್ಖಂಡ್ ನಲ್ಲಿ ನಿರ್ಬಂಧ ಜಾರಿಗೊಳಿಸಲಾಗಿತ್ತು.
ಮದುವೆಯಲ್ಲಿ ಕೇವಲ 11 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅದು ಹೇಗೆ ಕೇವಲ 11 ಮಂದಿ ಲೆಕ್ಕ ಹೇಗೆ ಅಂತಿಮಪಡಿಸಿದ್ದಾರೆ ಎಂಬ ಬಗ್ಗೆ ಕೂಡ ಚರ್ಚೆ ನಡೆದಿದೆ. ಹುಡುಗನ ಕಡೆಯ ಫ್ಯಾಮಿಲಿಯಲ್ಲಿ ಅಪ್ಪ ಅಮ್ಮ ಇಬ್ಬರು ಮಕ್ಕಳು, ಹುಡುಗಿಯ ಕಡೆಯ ಫ್ಯಾಮಿಲಿಯಲ್ಲಿ ಮತ್ತೆ ಇದೇ ರೀತಿ ನಾಲ್ಕು ಜನ. ಒಟ್ಟು 8 ಆಯಿತು. ಆನಂತರ ಈ ಎರಡು ಕುಟುಂಬಗಳಲ್ಲಿ ಮಾವನ ಸ್ಥಾನದಲ್ಲಿ ನಿಲ್ಲಲು ಒಬ್ಬೊಬ್ಬ ವ್ಯಕ್ತಿ. ಇಲ್ಲಿಗೆ ಭರ್ತಿ ಹತ್ತು ಜನ ಆಯಿತು. ಮದುವೆ ನೆರವೇರಿಸಿಕೊಳ್ಳಲು ಭಟ್ರು ಬೇಕಲ್ಲ. ಅಲ್ಲಿಗೆ ಒಟ್ಟು 11 ಜನರ ಲೆಕ್ಕ ಸರಿಹೋಗುತ್ತದೆ.
ಕ್ರಿಕೆಟ್ನಲ್ಲಿ 11 ಮಂದಿ ಆಟಗಾರರು ಇರುತ್ತಾರೆ. ಅದರ ಆಧಾರದಲ್ಲಿ ಈ ತೀರ್ಮಾನಕ್ಕೆ ಬಂದಿದೆ ಎಂದು ಜನ ಅಲ್ಲಿ ತಮಾಷೆ ಮಾಡಿಕೊಳ್ಳುತ್ತಿದ್ದಾರೆ.