ಕುಕ್ಕೆ ಸುಬ್ರಹ್ಮಣ್ಯ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ..ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಮರಳಿ ಕಾಡಿಗೆ..ಉರಗ ಪ್ರೇಮಿ ಮಾಧವ ಕೈಚಳಕದಿಂದ ಬಂಧಿಯಾದ ಉರಗ

Share the Article

ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿ ಸುಮಾರು ಹನ್ನೊಂದು ವರೆ ಅಡಿ ಉದ್ದವಿರುವ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಬೃಹದಾಕಾರವಾಗಿರುವ ಈ ಕಾಳಿಂಗನನ್ನು ಉರಗ ಪ್ರೇಮಿ ಮಾಧವ ಅವರು ರಕ್ಷಿಸಿದ್ದು ವಲಯ ಅರಣ್ಯಾಧಿಕಾರಿಗಳ ಸಹಕಾರದಿಂದ ಮರಳಿ ಕಾಡಿಗೆ ಬಿಡಲಾಯಿತು.

ಕುಕ್ಕೆ ಪರಿಸರದಲ್ಲಿ ಚಿರಪರಿಚಿತರಾಗಿರುವ ಮಾಧವ ಅವರು ಸುಮಾರು 2000 ನೇ ಇಸವಿಯಲ್ಲಿ ಈ ಹವ್ಯಾಸ ರೂಡಿಸಿಕೊಂಡರು. ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಹಲವೆಡೆ ಹಾವು ಹಿಡಿಯಲು ಇವರಿಗೆ ಕರೆ ಬರುತ್ತದೆ. ಈ ವರೆಗೆ ಸುಮಾರು 11000 ಸಾವಿರ ಹಾವುಗಳನ್ನು ಹಿಡಿದು ರಕ್ಷಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ವೃತ್ತಿಯಲ್ಲಿ ಚಾಲಕನಾಗಿರುವ ಮಾಧವ ಅವರು ಕುಕ್ಕೆ ಯಲ್ಲಿ ‘ಸ್ನೇಕ್ ಕ್ಯಾಚೆರ್ ಮಾಧವ’ ಎಂದೇ ಪರಿಚಿತರು.

ಮೊದಲು ಹಿಡಿದ ಹಾವು

ಕಾಳಿಂಗ ಸರ್ಪ ರಕ್ಷಣೆಯ ಕಾರ್ಯಾಚರಣೆಯಲ್ಲಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಹಾಜರಿದ್ದು ಮರಳಿ ಕಾಡಿಗೆ ಬಿಡುವಲ್ಲಿ ಸಹಕರಿಸಿದರು.

Leave A Reply