ಲಾಕ್ ಡೌನ್ ಸಮಯದಲ್ಲಿ ಬೀಸುವ ಲಾಠಿಯಿಂದ ತಪ್ಪಿಸಿಕೊಳ್ಳಲು ಯುವಕನ ಸಾಲಿಡ್ ಉಪಾಯ | ವೈರಲ್ ಫೋಟೋ ಹಿಂದಿದೆ ಒಂದು ಸತ್ಯ !
ಕೋವಿಡ್-19 ಎರಡನೇ ಅಲೆ ಭೀತಿ ಒಂದೆಡೆ, ಅದರ ಕಟ್ಟು ಪಾಡುಗಳು ಇನ್ನೊಂದೆಡೆ. ಇದೆಲ್ಲ ಜನರಿಗೆ ಕಿರಿಕಿರಿ ತಂದದ್ದು ನಿಜ. ಬೆಳಿಗ್ಗೆ ತಾನೇ ಒಬ್ಬಾತ ಬೀದಿ ಸುತ್ತಲು ಹಾಲಿನ ಕ್ಯಾನ್ ಅನ್ನು ಯಾವಾಗಲೂ ತನ್ನ ಜೊತೆಗಿಟ್ಟುಕೊಂಡು ಸಾಗುವುದು ವೈರಲ್ ಆಗಿತ್ತು. ಪೊಲೀಸರು ಮತ್ತು ಅಧಿಕಾರಿಗಳು ಆತನಿಗೆ ಬುದ್ಧಿವಾದ ಮತ್ತು ವಾರ್ನಿಂಗ್ ಮಾಡಿ ಕಳಿಸಿದ್ದರು.
ಇಲ್ಲೊಬ್ಬ ವ್ಯಕ್ತಿ, ಪೊಲೀಸರ ಏಟಿನಿಂದ ತಪ್ಪಿಸಿಕೊಳ್ಳಲು ಬೆನ್ನ ಹಿಂದೆ ತಗಡು ಕಟ್ಟಿಕೊಂಡು ಸೈಕಲ್ ಹೊಡೆಯುತ್ತಿದ್ದಾನೆ. ತಲೆಗೆ ಹೆಲ್ಮೆಟ್ ಬೇರೆ ಧರಿಸಿದ್ದಾನೆ. ಹೀಗೆ ಬೆನ್ನು ಮತ್ತು ತಲೆ ಭದ್ರ ಮಾಡಿಕೊಂಡು ಸಾಮಾನು ಖರೀದಿ ಮಾಡಲು ಹೋದರಾಯಿತು.ಪೊಲೀಸರು ಹಿಂದಿನಿಂದ ಎರಡು ಕೊಟ್ಟರೂ, ‘ ಬೆನ್ನು ಬಚಾವ್ ‘ ಎಂಬ ಆಲೋಚನೆ ಆತನದು.
ಇಲ್ಲಿರುವ ಚಿತ್ರ ನೋಡಿದರೆ ನಿಮಗೆ ಕೆಲವು ಪ್ರಶ್ನೆ ಮೂಡುವುದು ಸಹಜ. ಬೆನ್ನಿಗೆ ತಗಡು ಇದೆ. ಕಾಲಿಗೆ ಏಟು ಬಿದ್ದರೆ…?! ಅಷ್ಟೆಲ್ಲ ಮುಂದೆ ಹೋಗಿ ನೀವು ಯೋಚಿಸುವ ಅಗತ್ಯ ಇಲ್ಲ. ಯಾಕೆಂದರೆ ಇದು ಕುಂಭಾಸಿಯ ವಿನೇಂದ್ರ ಆಚಾರ್ಯ ಎಂಬವರು ತೆಗೆದ ಒಂದು ಕ್ರಿಯಾತ್ಮಕ ವೀಡಿಯೋ.
ಕೆಲ ದಿನಗಳಿಂದ ಈ ವಿಡಿಯೋ ಅಲ್ಲಲ್ಲಿ ಹರಿದಾಡುತ್ತಿದ್ದು ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ಹೇಳಿದಂತೆ ಇದು ಕ್ರಿಯೇಟಿವ್ ವೀಡಿಯೊ. ಈ ಫೋಟೋ ನೋಡಿ ಹಿಂದುಗಡೆ ಡಬ್ಬಿ ಕಟ್ಟಿಕೊಳ್ಳಲು ಯಾರೂ ಹೋಗುವುದು ಬೇಡ. ಮುಂದುಗಡೆ ಆಯಕಟ್ಟಿನ ಜಾಗಕ್ಕೆ ಬಿದ್ದೀತು ಲಾಠಿ ಏಟು !