ಬೆಳ್ತಂಗಡಿ, ಉಜಿರೆಯಲ್ಲಿ ಪೊಲೀಸ್ ದಾಳಿ | ಸೋಂಕು ನಿರ್ಲಕ್ಷ್ಯ ವಹಿಸಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಗಳ ಮೇಲೆ ಕೇಸು ದಾಖಲು
ಸೋಂಕನ್ನು ಹರಡುವ ಕೃತ್ಯವನ್ನು ನಿರ್ಲಕ್ಷಿಸಿ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸಿದ ಅಂಗಡಿ, ಹೋಟೆಲ್ ಮಾಲಕರ ವಿರುದ್ಧ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜಿರೆಯ ಒಂದು ಕಾಂಪ್ಲೆಕ್ಸ್ ನಲ್ಲಿರುವ ಸಲೂನ್ ನಲ್ಲಿ ಅಂಗಡಿಯ ಅರ್ಧ ಬಾಗಿಲು ತೆರೆದು ಸರ್ವೀಸ್ ನಡೆಯುತ್ತಿತ್ತು.
ಆಲ್ಲಿ ಕೆಲವರು ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಪಾಲಿಸದೆ ಗುಂಪಾಗಿ ಸೇರಿದ್ದು ಕ್ಷೌರ ನಡೆಸುತ್ತಿದ್ದ ಕಾರಣ ಪ್ರಕರಣ ದಾಖಲಿಸಲಾಗಿದೆ.
ಉಜಿರೆಯ ಇನ್ನೊಂದು ಕಡೆ ಅರಿಪ್ಪಾಡಿ ಕಾಂಪ್ಲೆಕ್ಸ್ ನಲ್ಲಿರುವ ಟ್ರೆಂಡ್ ಚಪ್ಪಲಿ ಅಂಗಡಿಯಲ್ಲಿ ಮಾಲಕರು ಗ್ರಾಹಕರನ್ನು ಸೇರಿಸಿಕೊಂಡು ಚಪ್ಪಲಿ ವ್ಯಾಪಾರ ನಡೆಸುತ್ತಿರುವುದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಜಿರೆ ಪೇಟೆಯ ಶೆಟ್ಟಿ ಲಂಚ್ ಹೋಮ್ ಹೊಟೇಲಿನಲ್ಲು 10 ಜನರು ಗುಂಪಾಗಿ ಚಾ ಕುಡಿಯುತ್ತಾ ತಿಂಡಿ ತಿನ್ನುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಿಂಡಿ ಪಾರ್ಸೆಲ್ ಮಾತ್ರ ಅವಕಾಶ ಇರುವಾಗ, ಹೊಟೇಲ್ ನಲ್ಲೇ ಕೂತು ತಿನ್ನುತ್ತಿದ್ದರುವುದು ಕಂಡು ಬಂದಿದೆ.