ಮೇ 3 ರಿಂದ 20 ತನಕ ದೇಶದಲ್ಲಿ ಟೋಟಲ್ ಲಾಕ್ ಡೌನ್ ? | ವೈರಲ್ ಆಗಿದೆ ನ್ಯಾಷನಲ್ ಟಿವಿ ಚಾನಲ್ ನ ನ್ಯೂಸ್ ಪೋಸ್ಟ್ !
ದೇಶದಲ್ಲಿ ಮೇ 3 ರಿಂದ 20 ರ ವರೆಗೆ ಟೋಟಲ್ ಲಾಕ್ ಡೌನ್ ಹೇರಲಾಗುತ್ತದೆ ಎಂಬ ಪ್ರೈವೇಟ್ ಟಿವಿ ಒಂದರ ಕ್ಲಿಪ್ಪಿಂಗ್ ಗಳು ದೇಶದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ನಿಜಕ್ಕೂ ಮೋದಿ ಟೋಟಲ್ ಲಾಕ್ ಡೌನ್ ಮಾಡಿಯೇ ಬಿಡುತ್ತಾರಾ ?! ಮಾಡಿದರೆ ಅದೆಷ್ಟು ದಿನ ಲಾಕ್ ಡೌನ್ ಇರುತ್ತದೆ, ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮತ್ತೆ ದೇಶಾದ್ಯಂತ ಮೇ 3 ರಿಂದ 20 ರವರೆಗೆ ಟೋಟಲ್ ಲಾಕ್ ಡೌನ್ ಆದರೆ ಗತಿ ಏನು ಎಂದು ಜನ ಗಾಬರಿಗೆ ಬಿದ್ದಿದ್ದಾರೆ. ಈ ಸುದ್ದಿಯ ಅಸಲಿತನವನ್ನು ಪತ್ತೆ ಮಾಡಲು ಹೊರಟಾಗ ಅದು ಸುಳ್ಳು ಸುದ್ದಿ ಎಂದು ಪತ್ತೆಯಾಗಿದೆ.
ಇದೀಗ ಸತ್ಯ ಹೊರ ಬಿದ್ದಿದ್ದು ಮೊದಲಿಗೆ ಎಸ್. ರಾಜಪೂತ್ ಎಂಬವರು ಝೀ ಟಿವಿಯ ಟಿವಿ ಕ್ಲಿಪ್ಪಿಂಗ್ ಎಡಿಟ್ ಮಾಡಿ ಮೇ 3 ರಿಂದ 20 ರ ವರೆಗೆ ಲಾಕ್ ಡೌನ್ ದೇಶಾದ್ಯಂತ ಟೋಟಲ್ ಲಾಕ್ ಡೌನ್ ಇರಲಿದೆ ಎಂಬ ಸುಳ್ಳು ಸುದ್ದಿ ಹರಡಿದ್ದ. ಈ ವಿಷಯ ಫ್ಯಾಕ್ಟ್ ಚೆಕ್ ನಲ್ಲಿ ಪತ್ತೆ ಆಗಿದೆ.
ಹಿಂದೆ ಏಪ್ರಿಲ್ 15 ರಿಂದ 30 ರ ವರೆಗೆ ಟೋಟಲ್ ಲಾಕ್ಡೌನ್ ಮಾಡಲಾಗುತ್ತದೆ ಎಂಬ ಸುದ್ದಿ ಬಂದಿತ್ತು. ಅದರ ಸತ್ಯಾಸತ್ಯತೆ ಪತ್ತೆ ಮಾಡಲು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಹೊರಟಿತ್ತು. ಅದು ಕೂಡ ಸುಳ್ಳು ಸುದ್ದಿ ಹುಟ್ಟಿಸಿದ್ದು ಎಂದು ಕಂಫಾರ್ಮ್ ಆಗಿತ್ತು.
ಪ್ರಧಾನಿ ಮೋದಿ ಹೇಳಿದಂತೆ ದೇಶಾದ್ಯಂತ ಟೋಟಲ್ ಲಾಕ್ ಡೌನ್ ಹೇರುವ ಸಾಧ್ಯತೆ ಕ್ಷೀಣ. ಕೋರೋನಾ ವನ್ನ ನಮ್ಮ ನಡವಳಿಕೆಯಿಂದ ಎದುರಿಸೋಣ, ಲಾಕ್ ಡೌನ್ ಕೊನೆಯ ಅಸ್ತ್ರ ಅಂತ ಮೋದಿ ಹಲವು ಬಾರಿ ಪುನರ್ ಉಚ್ಚರಿಸಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ರಾಜ್ಯಮಟ್ಟದ ಲಾಗಿದ್ದು ಜನಸಾಮಾನ್ಯರಿಗೆ ಅಂತಹ ದೊಡ್ಡ ವ್ಯತ್ಯಾಸವಿಲ್ಲ. ಹಾಗಾಗಿ ಇನ್ನು ಮುಂದೆ ದೇಶವ್ಯಾಪಿ ಟೋಟಲ್ ಲಾಕ್ಡೌನ್ ಹೇರಲಾಗುತ್ತದೆ ಎಂಬ ಗುಮ್ಮಕ್ಕೆ ಹೆದರಿ ಕೊಳ್ಳಬೇಕಾಗಿಲ್ಲ. ಸದ್ಯದ ಮಟ್ಟಿಗೆ ದೇಶವ್ಯಾಪಿ ಲಾಕ್ಡೌನ್ ಸಾಧ್ಯತೆಯನ್ನು ತಳ್ಳಿಹಾಕಬಹುದು.