ಲಾಕ್ ಡೌನ್ ನ ಮೊದಲನೇ ದಿನವೇ ಮಾರ್ಗಸೂಚಿಯಲ್ಲಿ ಬದಲಾವಣೆ | ಗಾರ್ಮೆಂಟ್ ಕಂಪನಿಗಳು 50 % ಕೆಲಸ ಮಾಡಲು ಅನುಮತಿ !
ರಾಜ್ಯ ಸರ್ಕಾರ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಲಾಕ್ಡೌನ್ ಪ್ರಾರಂಭವಾದ ಮೊದಲನೇ ದಿನವೇ ಸರಕಾರ ತನ್ನ ಹಿಡಿತ ಸಡಿಲಗೊಳಿಸಿದ್ದು, ಗಾರ್ಮೆಂಟ್ ಉತ್ಪಾದಕರ ಲಾಬಿಗೆ ಮಣಿದಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಶೇಕಡ 50 ಹಾಜರಾತಿಯೊಂದಿಗೆ ಕಾರ್ಯಾಚರಣೆಗೆ ಅನುಮತಿ ನೀಡಿದೆ.
ಬೆಂಗಳೂರು ಸುತ್ತಮುತ್ತ ಸುಮಾರು ಎಂಟು ಲಕ್ಷ ಕಾರ್ಮಿಕರು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿದ್ಧಪಡಿಸಲಾಗಿರುವ ಉತ್ಪನ್ನಗಳನ್ನು ರಫ್ತು ಮಾಡಲು ಈ ವಿನಾಯಿತಿ ನೀಡಲಾಗಿದೆ.
ಸಂಸ್ಥೆಗಳು ನೀಡಿರುವ ಗುರುತು ಪತ್ರ ತೋರಿಸಿ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.