ನನ್ನ ಗರ್ಲ್ ಫ್ರೆಂಡನ್ನು ಮೀಟ್ ಆಗಬೇಕಿದೆ, ಯಾವ ಸ್ಟಿಕ್ಕರ್ ಬಳಸಲಿ ಎಂದಾತ ಲಾಕ್ ಡೌನ್ ಸಂದರ್ಭ ಪೊಲೀಸರನ್ನು ಕೇಳಿದ್ದ | ಪೊಲೀಸರು ಅದಕ್ಕೆ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ ?!
ನಡುವೆ ಗರ್ಲ್ಫ್ರೆಂಡ್ನ ಮೀಟ್ ಮಾಡ್ಬೇಕು, ಏನು ಮಾಡ್ಲಿ? ಎಂದವನಿಗೆ ಸಖತ್ ಉತ್ತರ ನೀಡಿದ ಮುಂಬೈ ಪೋಲೀಸ್
ಲಾಕ್ಡೌನ್ ನಿಂದ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಆಗಿದೆ. ಆದರೆ ಇದರಿಂದ ಹೆಚ್ಚು ಸಮಸ್ಯೆ ಆದದ್ದು ನವ ಪ್ರೇಮಿಗಳಿಗೆ.
ಮುಂಬೈನಲ್ಲಿ ಏಪ್ರಿಲ್ 15 ರಿಂದ ಲಾಕ್ಡೌನ್ ಹೇರಿದ್ದು ಎಲ್ಲರಿಗೂ ತಿಳಿದೇ ಇದೆ. ಮೊನ್ನೆ ಮುಂಬೈನ ಯುವಪ್ರೇಮಿಯೊಬ್ಬ ಮುಂಬೈ ಪೊಲೀಸರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.
” ನಾನು ಹೊರ ಹೋಗಿ ನನ್ನ ಗೆಳತಿಯನ್ನು ಭೇಟಿಯಾಗಬೇಕಿದೆ; ಯಾವ ಸ್ಟಿಕ್ಕರ್ ಬಳಸಲಿ ಹೇಳಿ ?! ನಾನವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ” ಏನ್ ಮಾಡ್ಲಿ? ಎಂದು ಪೋಲೀಸರನ್ನೇ ಕೇಳಿದ್ದಾನೆ. ಹಾಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಆತ ಟ್ವೀಟ್ ಮಾಡಿದ್ದ. ಆತನ ಟ್ವೀಟ್ ಎಷ್ಟು ಫನ್ನಿ ಆಗಿದೆಯೋ, ಅದರಷ್ಟೇ ಜಾಣ ಉತ್ತರವನ್ನು ಮುಂಬೈ ಪೊಲೀಸರು ಮರು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಮುಂಬೈ ಪೋಲೀಸರ ಎದುರು ಈ ಪ್ರಶ್ನೆ ಇಟ್ಟಿರುವಾತನ ಹೆಸರು ಅಶ್ವಿನ್ ವಿನೋದ್. ಮುಂಬೈನಲ್ಲಿ ತುರ್ತು ಕೆಲಸಗಳಿಗಾಗಿ ಲಾಕ್ಡೌನ್ ಸಂದರ್ಭದಲ್ಲಿ ಹೊರಗೆ ಓಡಾಡುವವರಿಗೆ ಬೇರೆ ಬೇರೆಯಾದ ಸ್ಟಿಕರ್ಗಳನ್ನು ನೀಡಲಾಗ್ತಿದೆ. ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಆತ ಈ ಪ್ರಶ್ನೆ ಕೇಳಿದ್ದಾನೆ.
ಮುಂಬೈ ಪೋಲೀಸ್ ರು ತಾವು ಕರ್ತವ್ಯ ನಿಷ್ಠೆಯಲ್ಲಿ ಎಷ್ಟು ಖಡಕ್ ಆಗಿರುತ್ತಾರೆಯೋ ಟ್ವಿಟರ್ನಲ್ಲಿ ಕ್ರಿಯೇಟಿವ್ ಉತ್ತರವನ್ನು ನೀಡುವುದರಲ್ಲಿ ಕೂಡಾ ಅಷ್ಟೇ ನಿಸ್ಸೀಮರು. ಅದು ಈ ಹಿಂದೆ ಹಲವು ಸಂದರ್ಭಗಳಲ್ಲಿ ಪ್ರೂವ್ ಆಗಿದೆ. ಇಂಥಾ ಪ್ರಶ್ನೆಗಳಿಗೆಲ್ಲಾ ಬೊಂಬಾಟ್ ಉತ್ತರಗಳನ್ನು ನೀಡಿ ಅವರು ಈಗಾಗಲೇ ಭಾರೀ ಫೇಮಸ್ ಆಗಿದ್ದಾರೆ.
ಈಗ ಈತನ ಬೇಡಿಕೆಗೂ ಅಷ್ಟೇ ಅದ್ಭುತವಾಗಿ ಉತ್ತರಿಸಿದ್ದಾರೆ.
” ನಿಮಗೆ ಇದು ಅತ್ಯಂತ ತುರ್ತು ಅಗತ್ಯ ಕೆಲಸ ಎನ್ನುವುದು ನಮಗೆ ಅರ್ಥವಾಗುತ್ತದೆ. ಆದರೆ ನಮ್ಮ ಅಗತ್ಯ ಮತ್ತು ತುರ್ತು ಸೇವೆಗಳ ಅಡಿಯಲ್ಲಿ ನಿಮ್ಮ ಬೇಡಿಕೆ ಬರುವುದಿಲ್ಲ! “
” ದೂರದಲ್ಲಿದ್ದರೆ ಹೃದಯಗಳು ಮತ್ತಷ್ಟು ಹತ್ತಿರವಾಗುತ್ತವೆ, ಈಗ ತಾವು ಆರೋಗ್ಯದಿಂದಿದ್ದೀರಿ. ವಿ.ಸೂ: ನೀವಿಬ್ಬರೂ ಇಡೀ ಜೀವನ ಜೊತೆಯಾಗಿರಿ ಎಂದು ಹಾರೈಸುತ್ತೇವೆ. ಇದು ಕೇವಲ ಜೀವನದ ಒಂದು ಹಂತ ಅಷ್ಟೇ ” ಎಂದು ಉತ್ತರಿಸಿದ್ದಾರೆ.
ಇಂಥಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಟ್ವೀಟ್ಗಳ ಮೂಲಕ ಜನರಿಗೆ ಮಾಹಿತಿ ಮತ್ತು ಮನರಂಜನೆ ಎರಡನ್ನೂ ನೀಡ್ತಿದ್ದಾರೆ ಮುಂಬೈ ಪೋಲೀಸರು. ಪ್ರೀತಿಯ ಹುಡುಗನ ಪ್ರಶ್ನೆ ಮತ್ತು ಮುಂಬೈ ಪೊಲೀಸರ ಈ ಜಾಣ್ಮೆಯ ಉತ್ತರ ಇದೀಗ ವೈರಲ್ ಆಗಿದೆ. ಮಹಿಂದ್ರಾ ಕಂಪನಿಯ ಆನಂದ ಮಹಿಂದ್ರಾ ಸಹಿತ ಹಲವರು ಟ್ವೀಟ್ ಮಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.