ಮಂಗಳೂರು: ವಿವಿ ನೂತನ ಕುಲಸಚಿವರಾಗಿ ಡಾ.ಕಿಶೋರ್ ಕುಮಾರ್‌ ಅಧಿಕಾರ ಸ್ವೀಕಾರ

Share the Article

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್‌ ಸಿ.ಕೆ. (ಎಂಪಿಎಡ್, ಪಿಎಚ್‌ಡಿ) ನೂತನ ಕುಲಸಚಿವರಾಗಿ (ಆಡಳಿತ) ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ (ಉನ್ನತ ಶಿಕ್ಷಣ ಇಲಾಖೆ) ಮಹೇಶ್‌ ಆರ್‌. ಹೊರಡಿಸಿದ ಆದೇಶಾನುಸಾರ, ಮಾರ್ಚ್‌ 22 ರಿಂದ ಕೆ. ರಾಜು ಮೊಗವೀರ (ಕೆಎಎಸ್‌) ಅವರ ವರ್ಗಾವಣೆಯ ಬಳಿಕ ಉಸ್ತುವಾರಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್‌. ಧರ್ಮ ಅಧಿಕಾರ ಹಸ್ತಾಂತರಿಸಿದರು.

30 ವರ್ಷಗಳ ಬೋಧನೆ/ ಆಡಳಿತ ಅನುಭವವಿರುವ ಡಾ. ಕಿಶೋರ್‌ ಕುಮಾರ್‌ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ (ಉಸ್ತುವಾರಿ), ಸಿಂಡಿಕೇಟ್‌ ಸದಸ್ಯ, ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯ, ಡೀನ್‌ (ಶಿಕ್ಷಣ) ಇತ್ಯಾದಿ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

Leave A Reply

Your email address will not be published.