“ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವವರನ್ನು ಜೈಲಿಗೆ ಕಳುಹಿಸಬೇಕು”
ನೇರ ಮಾತು ಮತ್ತು ರಾಜಕೀಯ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್ನ ನಟಿ ಕಂಗನಾ ರಾಣಾವತ್ ಇದೀಗ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವವರನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಕಂಗನಾ, ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕ್ರಮ, ಕಾನೂನುಗಳ ಜಾರಿಗೊಳಿಸಬೇಕಿದೆ. ನಮ್ಮಲ್ಲಿರುವ ವೋಟ್ ಬ್ಯಾಂಕ್ ರಾಜಕೀಯದಿಂದ ನಾವು ಬೇಸತ್ತಿದ್ದೇವೆ. ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಆ ಪ್ರಧಾನಿ ಇಂದಿರಾ ಗಾಂಧಿ ಅವರು ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದರು. ಆದರೆ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಸದ್ಯದ ಬಿಕ್ಕಟ್ಟನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಮೂರನೇ ಮಗು ಹೊಂದುವವರಿಗೆ ಜೈಲು ಶಿಕ್ಷೆ ವಿಧಿಸುವುದು ಅಥವಾ ದಂಡ ವಿಧಿಸುವ ಕಾನೂನಿನ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.
ಕಂಗನಾ ಅವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಂಗನಾ ಅವರ ತಂದೆ ತಾಯಿಗೂ ಮೂರು ಕಂಗನಾ ಸೇರಿ ಒಟ್ಟು ಮೂರು ಮಕ್ಕಳಿದ್ದಾರೆ. ಈ ರೀತಿಯ ಕಾನೂನು ತರುವುದಾದರೆ ಮೊದಲು ಕಂಗನಾರ ಪೋಷಕರಿಗೆ ಶಿಕ್ಷೆಯಾಗಬೇಕು ಎಂದು ಕೆಲವರು ಕಾಲೆಳೆದಿದ್ದಾರೆ.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಕಾಮಿಡಿಯನ್ ಸಲೋನಿ ಗೌರ್ ಕಂಗನಾ ಅವರ ತಂದೆಗೆ ಮೂವರು ಮಕ್ಕಳು ಎಂದು ಕಾಲೆಳೆದರು. ಬಳಿಕ, ಇದಕ್ಕೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ಕಂಗನಾ ”ನನ್ನ ದೊಡ್ಡಪ್ಪನಿಗೆ 8 ಜನ ಒಡಹುಟ್ಟಿದವರು. ಬದಲಾಗುತ್ತಿರುವ ಸಮಯದೊಂದಿಗೆ ನಾವು ಬದಲಾಗಬೇಕು. ಚೀನಾದಂತಹ ಜನಸಂಖ್ಯೆ ನಿಯಂತ್ರಣದ ನಿಯಮಗಳಂತೆ ನಾವು ಹೊಂದಬೇಕು” ಎಂದು ಪ್ರೌಢ ವಾಗಿ ಮಾತಾಡಿದ್ದಾರೆ ಕಂಗನಾ.
ಇನ್ನೊಂದು ಟ್ವೀಟ್ನಲ್ಲಿ ಮಾತು ಮುಂದುವರಿಸಿದ ಕಂಗನಾ ”ಈ ವಿಚಾರ ಸಂಕೀರ್ಣವನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಜೀವನದಲ್ಲಿ ಏನಾದರೂ ಯೋಗ್ಯವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಜನರಿಂದ ನೀವು ಗಳಿಸಿದ ಯಶಸ್ಸನ್ನು ಅಪಹಾಸ್ಯ ಮಾಡಬೇಡಿ. ನಿಮಗೆ ಸ್ಪಷ್ಟವಾಗಿ ಏನೂ ಉತ್ತಮ ಎಂದು ತಿಳಿದಿಲ್ಲ ಮೂರ್ಖ” ಎಂದು ಸಮಯೋಚಿತ ಮತ್ತು ಅಷ್ಟೇ ಖಾರದ ತಿರುಗೇಟು ನೀಡಿದ್ದಾರೆ. ಕಂಗನಾ ಅವರ ಈ ಟ್ವೀಟ್ಗೆ ಸಲೋನಿ ಗೌರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.