ಎರಡು ವರ್ಷಗಳ ಕಾಲ‌ ಹಡೀಲು ಬಿಟ್ಟ ಕೃಷಿ ಭೂಮಿ ಸರಕಾರದ ವಶಕ್ಕೆ

Share the Article

ಒಂದೆರಡು ವರ್ಷಗಳ ಕಾಲ ಹಡಿಲು ಬಿಟ್ಟ ಭೂಮಿ ಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಸಮೀಪದಲ್ಲಿ ನಡೆದ ಉಡುಪಿ ವಿಧಾನಸಭಾ ಕ್ಷೇತ್ರದ ಕೃಷಿ ಆಂದೋಲನದ ಪ್ರಥಮ ಹಂತದ ಕೃಷಿ ಚಟುವಟಿಕೆ ನಡೆಸುವ ಗದ್ದೆಗಳಿಗೆ ಸಮರ್ಪಕ ವಾಗಿ ನೀರು ಹರಿದು ಹೋಗಲು ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಹಡಿಲು ಬಿಟ್ಟ ಕೃಷಿ ಭೂಮಿಯನ್ನು ಸರಕಾರ ಸುಪರ್ದಿಗೆ ತೆಗೆದು ಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದ್ದು ಇಂತಹವರಿಗೆ ನೊಟೀಸು ನೀಡಲಾಗುತ್ತದೆ. ಜಿಲ್ಲೆ ಯಲ್ಲಿ ಹಡಿಲು ಬಿಟ್ಟಿರುವ ಭೂಮಿಗಳನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರ್‌‌ಗಳಿಗೆ ಸೂಚಿಸಲಾಗಿದೆ.

ಎರಡನೇ ಹಂತ ವಾಗಿ ಹಡಿಲು ಭೂಮಿಯ ಮಾಲಕರಿ ಗೆ ನೊಟೀಸು ನೀಡಲಾಗು ತ್ತದೆ. ನಂತರವೂ ಭೂಮಿ ಯಲ್ಲಿ ಕೃಷಿ ಮಾಡದೆ ಹೋದರೆ, ಅದನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ ಎಂದರು.

Leave A Reply