ಕೋವಿಡ್ ಹಿನ್ನೆಲೆ | ಭಾರತಕ್ಕೆ ಸಂಪರ್ಕಿಸುವ ವಿಮಾನಗಳಿಗೆ ನಿಷೇಧ ಹೇರಿದ ಹಾಂಕಾಂಗ್
ಭಾರತದಲ್ಲಿ ಸೋಂಕಿತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳಿಗೆ ನಿಷೇಧ ಹೇರಿ ಹಾಂಕಾಂಗ್ ನಿರ್ಧಾರ ಕೈಗೊಂಡಿದೆ.
ಭಾರತವಲ್ಲದೆ ಪಾಕಿಸ್ಥಾನ ಮತ್ತು ಫಿಲಿಫೈನ್ಸ್ ದೇಶಗಳಿಂದ ಬರುವ ವಿಮಾನಗಳನ್ನೂ ಹಾಂಕಾಂಗ್ ನಿಷೇಧಿಸಿದೆ.
ಈ ತಿಂಗಳಿನಲ್ಲಿ ಎರಡು ವಿಸ್ತಾರಾ ವಿಮಾನಗಳಲ್ಲಿ ಆಗಮಿಸಿದ 50 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ಈ ನಿರ್ಬಂಧ ಹೇರಲಾಗಿದೆ.
ರವಿವಾರ ಮುಂಬೈನಿಂದ ಹಾಂಕಾಂಗ್ ಗೆ ತೆರಳಿದ ವಿಸ್ತಾರ ವಿಮಾನದಲ್ಲಿ ಮೂವರು ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ದೃಡವಾಗಿದೆ. ಎಪ್ರಿಲ್ 4ರಂದು ದೆಹಲಿಯಿಂದ ತೆರಳಿದ್ದ ವಿಮಾನದಲ್ಲಿ 47 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಈಗಾಗಲೇ ನ್ಯೂಜಿಲೆಂಡ್ ಸಹ ಭಾರತದಿಂದ ಸಂಪರ್ಕಿಸುವ ವಿಮಾನಗಳಿಗೆ ನಿಷೇಧ ಹೇರಿದೆ.