ಶಿಕಾರಿಯನ್ನು ಬೆನ್ನಟ್ಟಿ ಅನೂಹ್ಯ ವೇಗದಿಂದ ಓಡಿ ಬಂದ ಸಿಂಹ | ಪಕ್ಕದಲ್ಲೇ ಇದ್ದರು ಸಫಾರಿ ಹೊರಟ ಪ್ರವಾಸಿಗಳು, ಮುಂದೇನಾಯ್ತು ನೀವೇ ನೋಡಿ

ಹುಲಿ ಸಿಂಹಗಳು ಪಳಗಿದ ಹಂತಕರು. ಹುಟ್ಟುತ್ತಲೇ ಬೇಟೆಯಾಡುವ ಕಲೆಯನ್ನು ರಕ್ತದಲ್ಲಿ ಬರೆಸಿಕೊಂಡು ಬಂದಂತಹ ಹಿಂಸ್ರ ಮೃಗಗಳು.
ಪೊಗದಸ್ತ ಊಟಕ್ಕೆ ಮಾತ್ರ ಕಾದು ಕೂರುವ ಜಾಯಮಾನ ಅವರದು. ಕಾಂಜಿ ಪೀಂಜಿ ರುಚಿಹೀನ ಪ್ರಾಣಿಗಳು ತಮ್ಮ ಮೈ ಒರೆಸಿಕೊಂಡು ಹೋದರೂ ಕೂಡ ಅವುಗಳೆಡೆಗೆ ಒಂದು ದಿವ್ಯ ನಿರ್ಲಕ್ಷ ಅವುಗಳದು. ಒಂದು ವೇಳೆ ಒಳ್ಳೆಯ ಊಟ ಸಿಕ್ಕಿತು ಎಂದ ತಕ್ಷಣ ಆ ಪ್ರಾಣಿಯ ಚಲನವಲನವನ್ನೆಲ್ಲ ಕಣ್ಣಲ್ಲೇ ಸ್ಕಾನ್ ಮಾಡಿ ಅವಕಾಶಕ್ಕಾಗಿ ತಾಳ್ಮೆಯಿಂದ ಕಾದು ಕೂರುತ್ತವೆ. ತಾಳ್ಮೆ ಬೇಟೆಗಾರನ ಮೊತ್ತ ಮೊದಲ ಆಯುಧ.

ಅವುಗಳು ಬೇಟೆಯಾಡುವುದರಲ್ಲಿ ಪಳಗಿದ ಪ್ರಾಣಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಮಟ್ಟಿಗಿನ ವೇಗದಲ್ಲಿ, ಬಲಿಯನ್ನು ಗುರಿಹಾಕುತ್ತವೆ ಅಂತ ಯಾರೂ ನೋಡಿರಲಿಕ್ಕಿಲ್ಲ.
ಇಂತಹ ಒಂದು ರುತ್ ಲೆಸ್ ಚೇಸ್ ಆಂಡ್ ಕ್ಯಾಚ್  ಮೊನ್ನೆ ಪ್ರವಾಸಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅದು ಸಫಾರಿ ವೇಳೆ ಸೆರೆಯಾದ ದೃಶ್ಯ. ಮೃಗಾಲಯದಲ್ಲಿ ಸಫಾರಿ ವಾಹನದಲ್ಲಿ ತೆರಳುವ ಖುಷಿಯೇ ಬೇರೆ. ಇಲ್ಲಿ ವನ್ಯಜೀವಿಗಳನ್ನು ಅವುಗಳ ಸ್ವಚ್ಛಂದ ಪರಿಸರದಲ್ಲಿ ನೋಡುತ್ತಾ ಮನಸ್ಸನ್ನು ವನ್ಯಲೋಕದಲ್ಲಿ ಕಳೆದುಕೊಂಡು ತಮ್ಮದೇ ಖುಷಿಯ ಲೋಕದಲ್ಲಿ ವಿಹರಿಸುತ್ತಿತ್ತು ಆ ಪ್ರವಾಸಿಗಳ ತಂಡ.
ಆ ಸಂದರ್ಭದಲ್ಲಿ ವನ್ಯಜೀವಿಗಳ ಬದುಕಿನ ಅಪರೂಪದ ದೃಶ್ಯ ತಮ್ಮ ಕಣ್ಣ ಮುಂದೆಯೇ ನಡೆದು ಹೋಗಿದೆ. ಅದರ ಒಂದು ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅದು ನಿಮ್ಮನ್ನು ನಿಬ್ಬೆರಗಾಗಿಸದೆ ಇರಲು ಸಾಧ್ಯವೇ ಇಲ್ಲ.

ಈ ಎಲ್ಲಾ ದೃಶ್ಯಗಳು ಅರೆಕ್ಷಣದಲ್ಲಿ ಎಲ್ಲರನ್ನೂ ಆಕರ್ಷಿಸುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಈಗ ನೆಟ್ಟಿಗರ ಗಮನ ಸೆಳೆದಿದೆ.

ಇದು ಸಿಂಹವೊಂದು ಅತ್ಯಂತ ವೇಗದಲ್ಲಿ ಓಡಿ ಬಂದು ಬೇಟೆಯಾಡುವ ಭಯಾನಕ ದೃಶ್ಯ. ಆ ಪ್ರವಾಸಿಗರು ತಮ್ಮ ವಾಹನದಲ್ಲಿ ಹೋಗುತ್ತಿದ್ದಾಗ ಪ್ರಾಣಿಯೊಂದು ಜೀವ ಭಯದಲ್ಲಿ ಓಡಿ ಬರುತ್ತಿದ್ದದ್ದು ಕಾಣಿಸಿತ್ತು. ಇದಾದ ಅರೆಕ್ಷಣದಲ್ಲಿ ಅದೇ ವೇಗದಲ್ಲಿ ಇನ್ನೊಂದು ದಾರಿಯಿಂದ ಓಡಿ ಬಂದಿತ್ತು ಸಿಂಹ ! ಹಾಗೆ ಬೆನ್ನಟ್ಟಿ ಬಂದ ಸಿಂಹವು ಜಿಂಕೆಗೆ ಡಿಕ್ಕಿಯಾಗಿ, ಅದನ್ನು ಹಿಡಿದು, ಬ್ಯಾಲೆನ್ಸ್ ತಪ್ಪದಂತೆ ರೋಲ್ ಆಗಿ ಆ ಸಿಂಹ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಆ ಪ್ರಾಣಿಯನ್ನು ಬೇಟೆಯಾಡಿತ್ತು. ಪ್ರವಾಸಿಗರಿದ್ದ ವಾಹನವನ್ನು ಅಲ್ಲೇ ಒರೆಸಿಕೊಂಡೆ ಈ ಸಿಂಹ ಮುಂದೆ ಹೋಗಿತ್ತು ತನ್ನ ಬಲಿಯ ಜತೆಗೆ !!

https://twitter.com/i/status/1381427775203110912

ಎರಡು ಪ್ರಾಣಿಗಳು ಧೂಳೆಬ್ಬೆಸಿ ಓಡುವ ಈ ದೃಶ್ಯವನ್ನು ಕಂಡಾಗಲೇ ಹೆದರಿಕೆಯಾಗುತ್ತದೆ.

ಕೆಲವರು ಈ ದೃಶ್ಯದ ಬಗ್ಗೆ ಭಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದಷ್ಟು ಮಂದಿ ಈ ದೃಶ್ಯ ಸೆರೆ ಹಿಡಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವನ್ಯಲೋಕದ ಬಗ್ಗೆ ಕುತೂಹಲ ಬೆಳೆಸಿಕೊಂಡವರು ಸೇರಿದಂತೆ ಎಲ್ಲರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ತಾಕತ್ತು ಈ ಅದ್ಭುತ ದೃಶ್ಯಕ್ಕಿದೆ.


Leave A Reply

Your email address will not be published.