ಈ ಸೈಕಲ್ ನ ಬೆಲೆ ಕೇವಲ 12 ಲಕ್ಷ ರೂಪಾಯಿಗಳು !

Share the Article

ಮಂಗಳೂರು: ದುಬಾರಿ ಬೆಲೆಯ ಬೈಕ್‌, ಕಾರುಗಳ ಖರೀದಿ ಸಾಮಾನ್ಯ. ಆದರೆ ಮಂಗಳೂರು ನಗರದಲ್ಲೊಬ್ಬರು 12 ಲ.ರೂ. ಮೌಲ್ಯದ ಸೈಕಲ್‌ ಖರೀದಿಸಿ ಗಮನ ಸೆಳೆದಿದ್ದಾರೆ.

ಮೈಸೂರಿನ “ಟ್ರಯತ್ಲಾನ್‌’ ಕ್ರೀಡಾ ಪಟುವೊಬ್ಬರು ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ತಾಜ್‌ ಸೈಕಲ್‌ ಕಂಪೆನಿಯಲ್ಲಿ ಅದನ್ನು ಖರೀದಿಸಿದ್ದಾರೆ. ಈಗಾಗಲೇ ಮಳಿಗೆ ಯಲ್ಲಿ ಈ ಸೈಕಲ್‌ ಪ್ರದರ್ಶನಗೊಳ್ಳುತ್ತಿದ್ದು, ಜೂ. 4ರಂದು ಖರೀದಿದಾರರಿಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಪ್ರಮುಖರಾದ ಮುಬಿನ್‌ ತಿಳಿಸಿದ್ದಾರೆ.

ಒಂದು ಕ್ಷಣ ಯೋಚಿಸಿ ನೋಡಿದರೆ 4 -5 ಜನ ಕುಟುಂಬ ಸಮೇತರಾಗಿ ಆರಾಮವಾಗಿ ಕುಳಿತುಕೊಂಡು ಹೋಗುವ ಕಾರುಗಳು ಇದೇ ಬೆಲೆಯಲ್ಲಿ ಲಭ್ಯವಿರುವಾಗ ಒಬ್ಬನಿಗಾಗಿ ಕಷ್ಟಪಟ್ಟು ಪೆಡಲ್ ತುಳಿಯುವ ಸೈಕಲ್ ಈ ಬೆಲೆಯಲ್ಲಿ ಅಗತ್ಯವಿದೆಯೇ ಎಂದು ಅನ್ನಿಸುತ್ತದೆ. ಅದೇ ರೀತಿ ಆಧುನಿಕ ದಿನದ ರಸ್ತೆ ಬೈಕ್‌ಗಾಗಿ ನಿಮ್ಮ ವಾರ್ಷಿಕ ಸಂಬಳದ ಒಂದು ದೊಡ್ಡ ಭಾಗವನ್ನು ಹಂಚಿಕೊಳ್ಳುವ ಬಗ್ಗೆ ನೀವು ಎರಡು ಬಾರಿ ಯೋಚಿಸಬೇಕಾದೀತು.

ಆದರೆ ಇದೊಂದು ಕ್ರೀಡಾ ಸೈಕಲ್ ಆಗಿದ್ದು ಇದನ್ನು ಸೈಕ್ಲಿಂಗ್‌, ಈಜು ಹಾಗೂ ಓಟವಿರುವ “ಟ್ರಯತ್ಲಾನ್‌’ ಎಂಬ ಕ್ರೀಡೆಯ ಪೈಕಿ ಅತಿ ವೇಗದ ಸೈಕ್ಲಿಂಗ್‌ಗಾಗಿ ಬಳಸಲಾಗುತ್ತವೆ. ಕ್ರೀಡೆಯಲ್ಲಿ ವ್ಯಕ್ತಿಯ ಸಾಧನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತ ಬಳಸುವ ಸಾಧನ ಕೂಡ. ಎರಡು ಜೊತೆಗೂಡಿದರೆ ಒಳ್ಳೆಯ ಫಲಿತಾಂಶ ನಿಶ್ಚಿತ.

ಕೆನಡಾ ಮೂಲದ ರೇಸಿಂಗ್‌ ಸೈಕಲ್‌ಗಳ ಸರ್‌ವೆಲ್ಲೊ ಕಂಪನಿಯವರ ಪಿಎಕ್ಸ್‌ ಸೀರೀಸ್‌ನ ಡ್ಯೂರೇಸ್‌ ಡೈ2 2020 ಮಾದರಿ ಸದ್ಯ ನಗರದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಈ ಸೈಕಲ್ ಅತಿ ಹಗುರ ಹಾಗೂ ಮೋನೊಕಾಕ್‌ ಕಾರ್ಬನ್‌ನಿಂದ ತಯಾರಾಗಿರುವ ಇದು ಏರೋ ಬೇಸ್‌ ಬಾರ್‌, ಉತ್ಕೃಷ್ಟ ದರ್ಜೆಯ ಶಿಮಾನೊ ಡ್ನೂರೇಸ್‌ ಡೈ2 ಡಿರೈಲ್ಯೂರ್‌ಗಳನ್ನು ಹೊಂದಿದೆ. ಹಾಗೆಯೇ ಸ್ಟ್ರಾಂಗ್ ಡ್ಯುರೇಬಿಲಿಟಿ ಗ್ರಿಪ್ ಬ್ಯಾಲೆನ್ಸ್ ಸಹ ಹೊಂದಿದೆ. ಇದನ್ನೆಲ್ಲಾ ಪರಿಗಣಿಸಿ ಇದರ ದರವನ್ನು ನಿಗದಿ ಮಾಡಲಾಗುತ್ತದೆ.

Leave A Reply