ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳನ್ನು ತೆಗೆಯಲ್ಲ – ಬೊಮ್ಮಾಯಿ | ಯು ಟರ್ನ್ ತೆಗೆದುಕೊಂಡ ಗೃಹ ಇಲಾಖೆ
ಬೆಂಗಳೂರು: ಜೂನ್ 4, ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳನ್ನು ಪುನರ್ ಹಂಚಿಕೆ ಮಾಡಿ ಸುತ್ತೊಲೆ ಹೊರಡಿಸಿತ್ತು. ಇದರಿಂದಾಗಿ 9000 ಗೃಹರಕ್ಷಕ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವಂತಾಗಿತ್ತು. ಇದೀಗ ಯಾವುದೇ ಗೃಹರಕ್ಷಕ ಸಿಬ್ಬಂದಿಗಳನ್ನು ತೆಗೆಯಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಗೃಹರಕ್ಷಕ ಸಿಬ್ಬಂದಿ ವೇತನದಲ್ಲಿ ಯಾವುದೆ ಕಡಿತ ಇಲ್ಲ. ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಸ್ತಾಪ ಇಲ್ಲ ಎಂದು ತಿಳಿಸಿದ್ದಾರೆ. ಸರಕಾರ ಹೆಚ್ಚುವರಿಯಾಗಿರುವ ಗೃಹರಕ್ಷಕರನ್ನು ಕೈಬಿಡಲಾಗುತ್ತದೆ ಎಂದು ಸುದ್ದಿ ಹಬ್ಬಿತ್ತು, ಇದರ ಬಗ್ಗೆ ಸ್ಪಷ್ಟನೆ ನೀಡಿದ ಅವರು ಇಂತಹ ಯಾವುದೆ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.
ಬೊಮ್ಮಾಯಿ ಅವರು ಸುದ್ದಿ ಹಬ್ಬಿತ್ತು ಎಂದು ಹೇಳಿದ್ದಾರೆ. ಅದು ಸುದ್ದಿ ಮಾತ್ರ ಅಲ್ಲ, ನಿಜ ಕೂಡ.
ಸುತ್ತೋಲೆಯನ್ನು ಹೊರಡಿಸಿದ ವಿಷಯವೇ ಗೃಹಮಂತ್ರಿಯವರಿಗೆ ಅರಿವಿಲ್ಲವಾ ಅಥವಾ
ಗೊತ್ತಿದ್ದೂ ಈಗ ಯು ಟರ್ನ್ ತೆಗೆದುಕೊಳ್ಳುತ್ತಿದ್ದಾರಾ ? ಸುತ್ತೋಲೆ ಇಲ್ಲಿದೆ ನೋಡಿ. ನೀವೇ ಡಿಸೈಡ್ ಮಾಡಿ.