ಕೊರೋನಾ ಎಫೆಕ್ಟ್ : ಇನ್ನು ಮುಂದೆ ಹೇರ್ ಕಟ್ಟಿಂಗ್ ಗೂ ಆಧಾರ್ ಕಾರ್ಡ್ ಕಡ್ಡಾಯ !
ಚೆನ್ನೈ: ಕೊರೋನಾ ಜನರ ಜೀವನ ಶೈಲಿಯನ್ನೇ ಬದಲಿಸಿದೆ. ಇಷ್ಟು ದಿನ ಕಟ್ಟಿಂಗ್ ಗೆ ಹೋಗುವಾಗ ಎಲ್ಲವನ್ನೂ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದೆವು. ಇನ್ನು ಅಗತ್ಯವಾದ ಕಾಗದಪತ್ರಗಳನ್ನು ಕಟ್ಟಿಕೊಂಡು ಹೋಗಬೇಕಾದ ಸನ್ನಿವೇಶ ಬಂದಿದೆ. ಇದೆಲ್ಲ ಕೊರೋನಾ ನಡೆಸಿದ ದರ್ಬಾರ್ ಎಂದು ಕಾಣುತ್ತದೆ. ಪಾಸ್ ಪೋರ್ಟ್ , ಡಿಎಲ್, ಬ್ಯಾಂಕ್ ಖಾತೆ ಹೀಗೆ ಹಲವು ಸಂದರ್ಭಗಳಲ್ಲಿ ಕಡ್ಡಾಯವಾಗಿದ್ದ ಆಧಾರ್ ಕಾರ್ಡ್ ಇನ್ಮುಂದೆ ಹೇರ್ ಕಟ್ ಗೂ ಕಡ್ಡಾಯ !
ಹೌದು ….ತಮಿಳುನಾಡಿನಲ್ಲಿ ಕೊರೋನಾ ಎಫೆಕ್ಟ್ ನಿಂದ ಇಂತಹದೊಂದು ಕಾನೂನು ಜಾರಿಯಾಗಿದೆ.
ಚೈನೈ ಸೇರಿದಂತೆ ತಮಿಳುನಾಡಿನ ನಗರಗಳಲ್ಲಿ ಸಲೂನ್ ನಲ್ಲಿ ಹೇರ್ ಕಟ್ ಗೆ ಬಂದವರ ಆಧಾರ ಕಾರ್ಡ್ ಸಂಖ್ಯೆಯನ್ನು ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದರೊಂದಿಗೆ ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ದಾಖಲಿಸುವಂತೆ ಸರ್ಕಾರ ಸೂಚಿಸಿದೆ. ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಲಾಕ್ ಡೌನ್ ಜೂನ್ 30 ರವರೆಗೆ ಮುಂದುವರಿಕೆಯಾಗಿದ್ದು, ಆದರೆ ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಸಲೂನ್ ನಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲ ನಿಯಮವನ್ನು ಸರಿಯಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಕೇವಲ ಸಲೂನ್ ಮಾತ್ರವಲ್ಲ, ಕೆಲ ಕಟ್ಟುನಿಟ್ಟಿನ ಕ್ರಮಗಳ ಜತೆ ಹೊಟೇಲ್, ರೆಸ್ಟೋರೆಂಟ್ ಹಾಗೂ ಸಾರಿಗೆ ವ್ಯವಸ್ಥೆ ಆರಂಭಕ್ಕೂ ತಮಿಳುನಾಡು ಸರ್ಕಾರ ಅನುಮತಿ ನೀಡಿದೆ.
ದೇಶದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ತಮಿಳುನಾಡು ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈವರೆಗೆ ತಮಿಳುನಾಡಿನಲ್ಲಿ 23,495 ಕೊರೋನಾ ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿದೆ.