ಕುತ್ಲೂರು ಗ್ರಾಮದ ಕುಕ್ಕುಜೆ – ಆಲಂಬದಲ್ಲಿ ಮುರಿದು ಬಿದ್ದ 40 ವರ್ಷದ ಸೇತುವೆ ಕೆಡವಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭ
ಕುತ್ಲೂರು ಗ್ರಾಮದ ಕುಕ್ಕುಜೆ – ಆಲಂಬ ಎಂಬಲ್ಲಿ 40 ವರ್ಷ ಹಿಂದೆ ನಿರ್ಮಾಣವಾಗಿದ್ದ, ವಾರದ ಹಿಂದೆ ಬಿದ್ದ ಸೇತುವೆ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಾರ್ಯ ಇದೀಗ ಪ್ರಾರಂಭವಾಗಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕುಕ್ಕುಜೆ-ಅಲಂಬ ಎಂಬಲ್ಲಿ ಸುಮಾರು 40 ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿದ್ದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಸೇತುವೆ ಕುಸಿದು ಬಿದ್ದಿತ್ತು. ಹಳೆಯ ಸೇತುವೆಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಶಾಸಕರಾದ ಹರೀಶ್ ಪೂಂಜಾ ಅವರು ಇಲ್ಲಿ ಸಂಪರ್ಕಕ್ಕೆ ಅಡಚಣೆಯಾಗದಂತೆ ತುರ್ತಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು.
ಅದರಂತೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ತುರ್ತಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಮುಗೆರೋಡಿ ಕನ್ಸ್ಟ್ರಕ್ಷನ್ ಅವರಿಗೆ ಸೂಚನೆ ನೀಡಿದ್ದರು. ನಿನ್ನೆ ಸೇತುವೆ ನಿರ್ಮಾಣದ ಕಾಮಗಾರಿ ಪ್ರಾರಂಭ ಆಗಿದ್ದು ಮಳೆ ಶುರುವಾಗಿ ನೀರಾಗುವ ಮೊದಲು ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗಿದೆ. ಹಳೆಯ ಸೇತುವೆಯನ್ನು ನೆಲಸಮ ಮಾಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಕುತ್ಲೂರು ಗ್ರಾಮದ ಕುಕ್ಕುಜೆ – ಆಲಂಬ ಸೇತುವೆ ಜನರ ಬಳಕೆಗೆ ಲಭ್ಯ ವಾಗಲಿದೆ.