ದೇಶದಲ್ಲಿ ಲಾಕ್ ಡೌನ್ 5.0 ಇದೆಯಾ ಎಂಬ ಬಗ್ಗೆ ಕೇಂದ್ರ ಸ್ಪಷ್ಟನೆ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್ಡೌನ್ ಮತ್ತೆ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ ಸಂಪೂರ್ಣ ಸುಳ್ಳು ಎಂದು ತಳ್ಳಿ ಹಾಕಿದೆ. ಆದುದರಿಂದ ಲಾಕ್ ಡೌನ್ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಈಗ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಮ್ಮ ಟ್ವೀಟ್ ಸಂದೇಶದಲ್ಲಿ ಹೇಳಿಕೆ ನೀಡಿದ್ದಾರೆ.’ ಲಾಕ್ಡೌನ್ ಕುರಿತ ವರದಿಗಳೆಲ್ಲವೂ ಸುಳ್ಳು. ಇವೆಲ್ಲಾ ವರದಿ ಮಾಡುವವರ ಊಹಾಪೋಹಗಳಾಗಿವೆ.’ ಎಂದು ಸಚಿವಾಲಯ ಹೇಳಿದೆ.
ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು ಸರ್ಕಾರ ಹೇಳಿದೆ ಮತ್ತು ಲಾಕ್ ಡೌನ್ 5.0 ಅನ್ನು ಪ್ರಧಾನಿ ಮೋದಿಯವರು ಮೇ 31 ಕ್ಕೆ ಘೋಷಿಸಲಿದ್ದಾರೆ ಎಂಬ ಬಗ್ಗೆ ಕೇಂದ್ರ ಸಚಿವಾಲಯ ಸ್ಪಷ್ಟಪಡಿಸಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಮುಂದಿನ ಆದೇಶ ಬರುವವರೆಗೂ ಶಾಪಿಂಗ್ ಮಾಲ್ಗಳು, ಶಾಲಾ-ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಅವರು ಹೇಳಿದ್ದಾರೆ.