ಉಡುಪಿ | ಜಿಲ್ಲಾ ಪಂಚಾಯತ್ ಗೂ ವಕ್ಕರಿಸಿದ ಕಿಲ್ಲರ್ ಕೊರೊನಾ
ಉಡುಪಿ ಜಿಲ್ಲಾ ಪಂಚಾಯತ್ ಹೊರ ಗುತ್ತಿಗೆ ನೌಕರನಿಗೆ ಕೊರೊನ ಸೋಂಕು ಕಂಡು ಬಂದ ಕಾರಣ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಕೊರೊನ ಸೋಂಕಿನ ಲಕ್ಷಣಗಳಾದ ಶೀತ ಮತ್ತು ಕೆಮ್ಮು ಕಂಡು ಬಂದ ಕಾರಣ ಆ ವ್ಯಕ್ತಿಯ ಗಂಟಲು ದ್ರವವನ್ನು ಕೊರೊನ ತಪಾಸಣೆಗೆ ಒಳಪಡಿಸಿದಾಗ ಕೊರೊನ ಸೋಂಕು ಇದೆ ಎನ್ನುವುದು ದೃಢಪಟ್ಟಿತು.
ಕೊರೊನಾ ಸೋಂಕಿನ ವ್ಯಕ್ತಿ ಮೇ 19ರಂದು ಕೊನೆಯ ಬಾರಿಗೆ ಜಿಲ್ಲಾ ಪಂಚಾಯತ್ ಗೆ ಭೇಟಿ ಕೊಟ್ಟಿದ್ದರಿಂದ
ಮುನ್ನೆಚ್ಚರಿಕೆ ಕ್ರಮವಾಗಿ ಕಚೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. ಮತ್ತು ಸ್ಯಾನಿಟೈಸ್ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೊಟ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲೀಗ ಮೇ 26ರಂದು ಜಿಲ್ಲಾ ಪಂಚಾಯತ್ ಕಚೇರಿ ಸಂಪೂರ್ಣವಾಗಿ ಮುಚ್ಚಿರುತ್ತದೆ. ಸಿಇಓ ಸಹಿತ ಯಾವುದೇ ಸಿಬ್ಬಂಧಿಗಳು ಕಚೇರಿಗೆ ಬರುವುದಿಲ್ಲ ಎಂದು ತಿಳಿದು ಬಂದಿದೆ.