ಉಡುಪಿಯಲ್ಲಿ ಮಗುವಿಗೆ ಕೋರೋನಾ | ರಾಜ್ಯದಲ್ಲಿ ಇವತ್ತು ಒಟ್ಟು 23 ಪ್ರಕರಣಗಳು

ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿದ್ದು ಇಂದೂ ಕೂಡ ರಾಜ್ಯದಲ್ಲಿ 23 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮ್ಮ ನೆರೆಯ ಜಿಲ್ಲೆ ಉಡುಪಿ ಜಿಲ್ಲೆಯಲ್ಲಿ 1 ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಇವತ್ತು ದಾಖಲಾದ ಕೊರೋನಾ ರೋಗಿಯು ವಿದೇಶದಿಂದ ಬಂದಿದ್ದ ದಂಪತಿಯ ಮಗುವಾಗಿದೆ.

ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 1079 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಶನಿವಾರ ಕೊರೊನಾ ಶಾಕ್ ಮತ್ತಷ್ಟು ಮುಂದುವರಿದಿದ್ದು, ಒಂದೇ ದಿನ ಬರೋಬ್ಬರಿ 14 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅದು ಕೂಡಾ ಎಲ್ಲ ಸೋಂಕುಗಳು ಆ ಹೌಸ್ ಕೀಪರ್ ಮಹಿಳೆಯಿಂದಲೇ 14 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ಇನ್ನುಳಿದಂತೆ ಹಾಸನದಲ್ಲಿ 3, ದಾವಣಗೆರೆ 1, ಮಂಡ್ಯ 1, ಧಾರವಾಡ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಮಂಡ್ಯದಲ್ಲಿ ಅಂತರ್ಜಿಲ್ಲಾ ಪ್ರಯಾಣದಿಂದ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಹಸಿರು ವಲಯದಲ್ಲಿರುವ ಹಾಸನದಲ್ಲಿ ಮುಂಬೈನಿಂದ ಬಂದಿದ್ದ ಮೂವರಿಗೆ ಮಾರಿ ವಕ್ಕರಿಸಿದೆ.

Leave A Reply

Your email address will not be published.