ವೈದ್ಯ ಡಾ. ದೀಪಕ್ ರೈ ಅವರ ಸಂದೇಶ ತಿರುಚಿ ಅವರ ವಿರುದ್ಧ ಸಮುದಾಯ ಎತ್ತಿಕಟ್ಟಿದ ಆರೋಪ | ರವಿಪ್ರಸಾದ್ ಶೆಟ್ಟಿ ಬಂಧನ | ಜಾಮೀನಿನ ಮೇಲೆ ಬಿಡುಗಡೆ

Share the Article

ಪುತ್ತೂರು, ಮೇ 16 : ಪಾಲ್ತಾಡಿಯಲ್ಲಿ ಕರ್ತವ್ಯದಲ್ಲಿರುವ ಡಾ. ದೀಪಕ್ ರೈ ಅವರು ರವಾನಿಸಿದ ಸಂದೇಶವೊಂದನ್ನು ತಿರುಚಿ, ಅವರ ವಿರುದ್ಧ ಸಮುದಾಯವೊಂದನ್ನು ಎತ್ತಿಕಟ್ಟಿದ ಎನ್ನಲಾದ ಆರೋಪಿ ರವಿಪ್ರಸಾದ್ ಶೆಟ್ಟಿಯವರನ್ನು ಬಂಧಿಸಿ ನಂತರ ನಂತರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಡಾ. ಸುರೇಶ್ ಪುತ್ತೂರಾಯರ ಮೇಲೆ ಈ ಹಿಂದೆ ಸಂದೇಶ ರವಾನಿಸಿ ಮಧ್ಯಂತರ ಜಾಮೀನು ಪಡೆದಿದ್ದರು ರವಿಪ್ರಸಾದ್ ಶೆಟ್ಟಿ.
ಈಗ ಮತ್ತೆ ಪಾಲ್ತಾಡಿ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಕೋವಿಡ್ ವಾರಿಯರ್ ಆಗಿರುವ ಡಾ. ದೀಪಕ್ ರೈಯವರ ಕುರಿತು ಮತ್ತದೇ ರೀತಿ ಸಂದೇಶ ರವಾನಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ದೀಪಕ್ ರೈ ಅವರು ನ್ಯಾಯಾಲಯಕ್ಕೆ ಹೋಗಿ ಸ್ವತಃ ಖಾಸಗಿ ದೂರು ನೀಡಿದ್ದು, ವಾಟ್ಸಾಪ್‌ನಲ್ಲಿ ಫಾವರ್ಡ್ ಮಾಡಿದ ಮೆಸೇಜುನ್ನು ತಿರುಚಿ ಫೇಸ್‌ಬುಕ್‌ನಲ್ಲಿ ಫಾವರ್ಡ್ ಮಾಡಿದ್ದಾರೆ ಎಂದು ರವಿಪ್ರಸಾದ್ ಶೆಟ್ಟಿ ವಿರುದ್ದ ಆರೋಪ ಮಾಡಿದ್ದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೂಡ ಆರೋಪಿಯನ್ನು ಬಂಧನ ಮಾಡುವಂತೆ ಪೋಲೀಸ್ ಇಲಾಖೆಗೆ ಮನವಿ ಮಾಡಿತ್ತು.

ಡಾ. ದೀಪಕ್ ರೈ ಅವರು ನೀಡಿದ ದೂರಿನ ಮೇಲೆ
ದೂರಿನ ಪರಿಶೀಲನೆ ನಡೆಸಿದ ನ್ಯಾಯಲಯವು ರವಿಪ್ರಸಾದ್ ಶೆಟ್ಟಿ ವಿರುದ್ದ ಪ್ರಕರಣ ದಾಖಲಿಸುವಂತೆ ಅದೇಶ ನೀಡಿತ್ತು. ಡಾ. ದೀಪಕ್ ರೈ ಅವರ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣೆ ಪೊಲೀಸರು ಮೇ.15 ರಂದು ಸಂಜೆ ರವಿಪ್ರಸಾದ್ ಶೆಟ್ಟಿಯನ್ನು ಬಂಧಿಸಿದ್ದರು.

ಘಟನೆಯ ಸಂಕ್ಷಿಪ್ತ ವಿವರ

ಮಾರ್ಚ್ ತಿಂಗಳಲ್ಲಿ ಡಾ.ದೀಪಕ್ ರೈ ಯವರ ಮೊಬೈಲ್ ಗೆ ಬಂದ ಸಂದೇಶವೊಂದನ್ನು ಕೆಲವು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿದ್ದರು.
ಮಾ. 21ರಂದು ಡಾ. ದೀಪಕ್ ರೈ ಅವರು ಸಂಜೆ ಕರ್ತವ್ಯದಲ್ಲಿರುವಾಗ ವಿದೇಶದಿಂದ ಬೆದರಿಕೆ ಕರೆ ಬರಲು ಪ್ರಾರಂಭವಾಗಿತ್ತು. ಕರೆಗಳು ಜಾಸ್ತಿಯಾದಾಗ ದೀಪಕ್ ರೈಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೇ ನ್ಯಾಯಾಲಯದ ಮೂಲಕ ಪ್ರಕರಣ ದಾಖಲಿಸುವಂತೆ ಪೊಲೀಸರು ಹೇಳಿದ್ದರು.

ಈ ಸಂಬಂಧ ಬಂಧನದ ಬೆನ್ನಿಗೇ ಆರೋಪಿ ರವಿಪ್ರಸಾದ್ ಶೆಟ್ಟಿ ಅವರಿಗೆ ಜಾಮೀನು ದೊರತಿದೆ. ಆರೋಪಿ ಪರವಾಗಿ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಆರೋಪಿಯನ್ನು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಬಂದಾಗ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Leave A Reply

Your email address will not be published.