ಸುಳ್ಯ |ಉತ್ತರಪ್ರದೇಶದ 202 ವಲಸೆ ಕಾರ್ಮಿಕರು ಹುಟ್ಟೂರಿಗೆ ಪ್ರಯಾಣ
ವರದಿ : ಹಸೈನಾರ್ ಜಯನಗರ
ಸುಳ್ಯ ತಾಲೂಕು ಆಡಳಿತದ ನೇತೃತ್ವದಲ್ಲಿ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನಾದ್ಯಂತ ಇರುವ ವಿವಿಧ ಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಹಾಗೂ ಬಿಹಾರ ಮೂಲದ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸುವಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದು, ಇದೀಗ ಉತ್ತರ ಪ್ರದೇಶದ ಜನರನ್ನು ತಮ್ಮ ತಮ್ಮ ಊರಿಗೆ ಕಳಿಸುವ ವ್ಯವಸ್ಥೆಯನ್ನು ಸುಳ್ಯ ಬಸ್ ನಿಲ್ದಾಣದಿಂದ ಮೇ 16ರಂದು ನಡೆಸಿದರು.. ಸುಳ್ಯ ಪರಿಸರದಿಂದ ಸುಮಾರು 145 ಮಂದಿ ಪ್ರಯಾಣ ಬೆಳೆಸಿದರೆ ಬೆಳ್ಳಾರೆ ಸುಬ್ರಹ್ಮಣ್ಯ ಭಾಗಗಳಿಂದ ಸುಮಾರು 57 ಮಂದಿ ಪ್ರಯಾಣಿಕರಿದ್ದು ಒಟ್ಟು 202 ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದೆ. ಎಲ್ಲಾ ಪ್ರಯಾಣಿಕರು ಸುಳ್ಯದಿಂದ ಪುತ್ತೂರುರಿಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದು ಪುತ್ತೂರಿನಿಂದ ಈಗಾಗಲೇ ರೈಲಿನಲ್ಲಿ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.
ಸುಳ್ಯ ತಹಸಿಲ್ದಾರ್ ಅನಂತ ಶಂಕರ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಂಜ ಕಂದಾಯ ನಿರೀಕ್ಷಕ ಶಂಕರ್, ಸುಳ್ಯ ಪೊಲೀಸ್ ಠಾಣೆ ಅಧಿಕಾರಿಗಳು, ಪ್ರಯಾಣಿಕರೊಂದಿಗೆ ಪುತ್ತೂರು ರೈಲ್ವೆ ನಿಲ್ದಾಣದ ವರೆಗೆ ತೆರಳಿ ಶುಭಹಾರೈಸಿರುತ್ತಾರೆ . ಈ ಕಾರ್ಯದಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳ ಪಿ ಡಿ ಒ ಗಳು, ಗ್ರಾಮ ಲೆಕ್ಕಾಧಿಕಾರಿಗಳು, ಸುಳ್ಯ ಕೆಎಸ್ಆರ್ಟಿಸಿ ಬಸ್ ಡಿಪೋ ಮ್ಯಾನೇಜರ್, ಸಿಬ್ಬಂದಿವರ್ಗದವರು ಸಹಕಾರವನ್ನು ನೀಡಿರುತ್ತಾರೆ.