ಸುರತ್ಕಲ್‌ನ ಮಹಿಳೆಗೆ ಕೊರೊನಾ |ಸುರತ್ಕಲ್ ಕಂಟೋನ್ಮೆಂಟ್ -ಡಿ.ಸಿ
ಮಂಗಳೂರು, ಮೇ 15 : ಕರಾವಳಿಗೆ ಇಂದು ಬಡಿದಪ್ಪಳಿಸಿದ ಕೊರೋನಾ ಸುನಾಮಿಗೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಬಂದಿದ್ದ 123 ಜನರಲ್ಲಿ 15 ಮಂದಿಯಲ್ಲಿ ಕೊರೊನಾ ದೃಢಪಟ್ಟಿರುತ್ತದೆ. ಅದಲ್ಲದೆ ಸುರತ್ಕಲ್ ನ 68 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢ ಪಟ್ಟಿದೆ.
ದುಬೈನಿಂದ ಆಗಮಿಸಿ ಆ ಪೈಕಿ 15 ಮಂದಿಗೆ ಕೊರೊನಾ ದೃಢ ಪಟ್ಟಿದೆ. ಇದರಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕಿರುವುದು ದೃಢಪಟ್ಟಿದೆ. ಇದೇ ವಿಮಾನದಲ್ಲಿ ಬಂದಿದ್ದ 38 ಮಂದಿ ಗರ್ಭಿಣಿಯರಿಗೆ ಸೋಂಕಿನ ಗುಣಲಕ್ಷಣಗಳು ಕಂಡುಬಂದಿಲ್ಲ. ಅದರೆ ಮುನ್ನೆಚ್ಚರಿಕಾ ಕ್ರಮವಾಗಿ ನೆಗೆಟಿವ್ ಬಂದ ಎಲ್ಲಾ ಪ್ರಯಾಣಿಕರ 12ನೇ ದಿನದಂದು ಕೋರೋನಾ ಪರೀಕ್ಷೆ ಗೆ ಒಳಪಡಿಸಿಲಿದ್ದೇವೆ ಹೇಳಿದರು.
ಇದೀಗ ಎಲ್ಲಾ 16 ಜನರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅದಲ್ಲದೆ ಸುರತ್ಕಲ್ ಮೂಲದ ಮಹಿಳೆಯೊಬ್ಬರಿಗೆ ಸೋಂಕಿರುವುದು ದೃಢ ಪಟ್ಟಿದೆ.
ಆದರೆ ಯಾವ ಮೂಲದಿಂದ ಹಬ್ಬಿದೆ ಎನ್ನುವ ಇನ್ನಷ್ಟೇ ತಿಳಿದುಬರಬೇಕಿದೆ. ಶೀಘ್ರವಾಗಿ ಅದರ ಮೂಲವನ್ನು ಪತ್ತೆ ಹಚ್ಚಲಾಗುವುದು. ಆ ಮಹಿಳೆಯು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದಿತ್ತು. ಹೀಗಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಿದಾದ ಸೋಂಕಿರುವುದು ದೃಢ ಪಟ್ಟಿದೆ ಎಂದು ತಿಳಿಸಿದರು.
ಈ ಹಿನ್ನಲೆಯಲ್ಲಿ ಸುರತ್ಕಲ್ ಪ್ರದೇಶವನ್ನು ಕಂಟೋನ್ಮೆಂಟ್ ಮಾಡಲಿದ್ದೇವೆ ಎಂದು ದ ಕ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.