ಮದುವೆಗೆ ಹಿರಿಯರು, ಮಕ್ಕಳು ಹಾಜರಾಗುವಂತಿಲ್ಲ | ಮಾರ್ಗಸೂಚಿ ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಕೊರೋನಾ ಲಾಕ್​​​​​​ಡೌನ್ ನಡುವೆ ಮದುವೆ ಸಮಾರಂಭ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಅನುಮತಿ ನೀಡಿತ್ತು. ಆಗ ಒಟ್ಟು 20 ಜನ ಮಾತ್ರ ಮದುವೆಗೆ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ  ಬಿಗಿ ಸ್ವಲ್ಪ ಸಡಿಲಗೊಳಿಸಲಾಗಿದೆ. ಅದಕ್ಕಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಮದುವೆ ಮನೆಗೆ ಪ್ರವೇಶ ನಿಷೇಧಿಸಲಾಗಿದೆ. ಹಾಗೆಯೇ 50 ಜನಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಮಾರ್ಗಸೂಚಿ ವಿವರ

  • ಸ್ಥಳೀಯ ಆಡಳಿತದಿಂದ ಅನುಮತಿ ಅತ್ಯಗತ್ಯ ಮತ್ತು ಟ್ರಾವೆಲ್ ಪಾಸ್ ಕಡ್ಡಾಯ ಇರಬೇಕು
  • ಕಂಟೇನ್ಮೆಂಟ್ ಝೋನ್​ನಲ್ಲಿರುವ ಯಾವುದೇ ವ್ಯಕ್ತಿಗೆ ಪಾಲ್ಗೊಳ್ಳುವಂತಿಲ್ಲ
  • 50 ಜನ‌ಕ್ಕಿಂತ ಹೆಚ್ಚು ಸೇರುವಂತಿಲ್ಲ
  • ಸ್ಥಳದಲ್ಲಿ ಹವಾ ನಿಯಂತ್ರಣವಿಲ್ಲದ ಉತ್ತಮ ನ್ಯಾಚುರಲ್ ವೆಂಟಿಲೇಷನ್ ಇರಬೇಕು
  • 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದ ಕೆಳಗಿನ ಮಕ್ಕಳಿಗೆ ಪ್ರವೇಶವಿಲ್ಲಹಾಗೂ ಅಗತ್ಯ ಸ್ಥಳಗಳಲ್ಲಿ ಸ್ಯಾನಿಟೈಸರ್​ ಇರಬೇಕು
  • ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ‌ಕಡ್ಡಾಯ
  • ಸ್ಕ್ರೀನಿಂಗ್ ವೇಳೆ ಜ್ವರ, ಶೀತ, ಕಫ, ಉಸಿರಾಟದ ತೊಂದರೆ ಕಂಡುಬಂದಲ್ಲಿ ಪ್ರವೇಶ ನಿಷೇಧ
  • ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು
  • ಎಲ್ಲರೂ ಒಂದು ಮೀಟರ್ ದೈಹಿಕ ಅಂತರ ಕಾಪಾಡಬೇಕು
  • ವಾಷ್ ರೂಮ್ ನಲ್ಲಿ ಹ್ಯಾಂಡ್​ವಾಷ್, ನೀರು, ಸೋಪು ಒದಗಿಸಬೇಕು
  • ಮದ್ಯ, ಗುಟ್ಕಾ, ಪಾನ್, ತಂಬಾಕು ಸೇವನೆಗೆ ಅವಕಾಶ ನಕಾರ
  • ಶುಚಿತ್ವ ಮತ್ತು ಹೈಜೆನಿಕ್ ಆಗಿರಬೇಕು
  • ಸಮನ್ವಯ ಕೆಲಸವನ್ನು ನೋಡಲ್ ವ್ಯಕ್ತಿ ನಿರ್ವಹಿಸಬೇಕು
  • ಪಾಲ್ಗೊಳ್ಳುವವರ ಪಟ್ಟಿ ಮತ್ತು ಫೋನ್ ನಂಬರ್ ಒದಗಿಸಬೇಕು
  • ಪಾಲ್ಗೊಳ್ಳುವ ಎಲ್ಲ ಅತಿಥಿಗಳು ಆರೋಗ್ಯ ಸೇತು ಆ್ಯಪ್​​​​​​​​​​​​​​​​​​​​​​​​​​​ ಡೌನ್ ಲೋಡ್ ಮಾಡಿಕೊಂಡಿರಬೇಕು.

Leave A Reply

Your email address will not be published.