ದಕ್ಷಿಣ ಕನ್ನಡ,ಉಡುಪಿಗೆ ನಿಲ್ಲದ ಕೋರೋನಾ ಆತಂಕ | ದುಬೈ ನಿಂದ ಹಾರಿ ಬಂದಿದೆ 15+6 ಕೋರೋನಾ ಕೇಸುಗಳು !
ಕೋರೋನಾದ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ 177 ಜನ ಭಾರತೀಯರು ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಬಂದಿದ್ದರೂ ಪ್ರೋಟೋಕಾಲ್ ನ ಪ್ರಕಾರ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಡ್ಡಲಾಗಿತ್ತು.
ಅವರ ಗಂಟಲ ದ್ರವ ಪರೀಕ್ಷೆಯ ಫಲಿತಾಂಶ ಇದೀಗ ಲಭ್ಯವಾಗಿದ್ದು, ಅವರಲ್ಲಿ 15 ಜನರಿಗೆ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ.
ಆ ಮೂಲಕ ದಕ್ಷಿಣ ಕನ್ನಡಕ್ಕೆ ಮತ್ತಷ್ಟು ಕೋರೋನಾ ಕಂಟಕ ಜಾಸ್ತಿಯಾಗಿದೆ. ನಮಗೆ ಈಗ ಇರುವ ಬಂಟ್ವಾಳ ಮತ್ತು ಫಸ್ಟ್ ನ್ಯೂರೋ ಸಮಸ್ಯೆಯನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರ ಮಧ್ಯೆ ಇದೊಂದು ಬರ್ಡನ್ ಎಂದು ಜನ ಹೇಳುತ್ತಿದ್ದಾರೆ.
ಇದರ ಮದ್ಯೆ ಉಡುಪಿಗೆ ಬಂದ 49 ಜನರಲ್ಲಿ 6 ಜನರಿಗೆ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಅವರು ಉಳಿದುಕೊಂಡಿರುವ ಹೊಟೇಲ್ಗಳಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಮೂಲಕ ರಾಜ್ಯದಲ್ಲಿ ಕೋರೋನಾ ರೋಗಿಗಳ ಸಂಖ್ಯೆ 1000 ದ ಗಡಿ ದಾಟಿದೆ. ರಾಜ್ಯದ ಒಟ್ಟು ಕೋರೋನಾ ಸಂಖ್ಯೆ ಇವತ್ತಿಗೆ 1032.
ದೇಶದಲ್ಲಿ ಈ ದಿನ 3967 ಹೊಸ ಈ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.