ಬೀದರ್ | ಕೋಟೆಗಳ ನಗರಿಯಲ್ಲಿ 49 ಪಾಸಿಟಿವ್ ರಲ್ಲಿ 48 ಜನರಿಗೆ ತಬ್ಲಿಘಿ ನಂಟು !
ಬೀದರ್ : ಪ್ರತಿ ದಿನ ಹೊಸ ಹೊಸ ಕೇಸುಗಳು ದಾಖಲಾಗುವ ಮೂಲಕ ಬೀದರ್ ಕೋರೋನಾ ದಾಳಿಯಿಂದ ತತ್ತರಿಸಿದೆ. ಮೊದಲ ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ ಎನ್ನುವ ಆಶಾದಾಯಕ ಸುದ್ದಿಯ ಮಾರನೇ ದಿನದಿಂದಲೇ ಕೋವಿಡ್-19 ನೈಜ ಆಟ ಶುರುವಾಗಿದೆ.
ಕಳೆದ ಕೇವಲ ಐದೇ ದಿನಗಳಲ್ಲೇ ಜಿಲ್ಲೆಯ 26 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಶೇಷವೆಂದರೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ 49 ಸೋಂಕಿನ ಪ್ರಕರಣಗಳಲ್ಲಿ 48 ಕ್ಕೆ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದವರ ನಂಟಿದೆ ಎಂದರೆ ತಬ್ಲಿಘಿ ಯಾವ ರೀತಿ ಬೀದರ್ ಅನ್ನು ಕಾಡುತ್ತಿದೆ ಎಂಬುದರ ಅರಿವಾಗುತ್ತದೆ.
ತಬ್ಲಿಘಿಗಳ ಸಂಪರ್ಕದಿಂದ ಇದೀಗ ಬೀದರ್‌ನ ಓಲ್ಡ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಹೆಚ್ಚುತ್ತಲೇ ಇದೆ. ಬೀದರ್ ನಗರದ ಓಲ್ಡ್ ಸಿಟಿ ಕೊರೊನಾ ಹಾಟ್ ಸ್ಪಾಟ್ ಆಗಿ ಹೊರ ಹೊಮ್ಮಿದೆ.
ಇದರಿಂದಾಗಿಯೇ ಜಿಲ್ಲಾಡಳಿತವು ಈ ಭಾಗದಲ್ಲಿನ ನಿವಾಸಿಗಳ ರ್ಯಾಂಡಮ್ ಟೆಸ್ಟ್ ಆರಂಭಿಸಿದೆ.