ಭೋಪಾಲ್ ಮಾದರಿಯ ಅನಿಲ ದುರಂತ | ವಿಶಾಖಪಟ್ಟಣದ ಎಲ್ ಜಿ ಪಾಲಿಮರ್ ಬಹುರಾಷ್ಟ್ರೀಯ ಕಂಪನಿ

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ  ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ.

ಭೋಪಾಲ್ ಅನಿಲ ದುರಂತದ ಮಾದರಿಯ ಗ್ಯಾಸ್ ಸೋರಿಕೆ ಇದಾಗಿದ್ದು ಈಗಾಗಲೇ ಎಂಟು ಮಂದಿ ಮೃತಪಟ್ಟಿದ್ದಾರೆ. ಒಟ್ಟು 128 ಜನರು ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಹತ್ತು ಜನರ ಸ್ಥಿತಿ ಚಿಂತಾಜನಕವಾಗಿದೆ. ಅಸ್ವಸ್ಥರಾದ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಆಂಬ್ಯುಲೆನ್ಸ್‌ಗಳು, ಅಗ್ನಿಶಾಮಕ ಸಿಬ್ಬಂದಿಗಳು ಧಾವಿಸಿ‌ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಶಾಖಪಟ್ಟಣಂ ಆರ್ ಆರ್ ಪುರ ವೆಂಕಟಪುರಂ ನಲ್ಲಿರುವ ಎಲ್ ಜಿ ಪಾಲಿಮರ್ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಇಂದು ಮುಂಜಾನೆ 3.30 ರ ಸುಮಾರಿಗೆ ಈ ಅನಿಲ ದುರಂತ ಸಂಭವಿಸಿದೆ. ಇದರ ಪರಿಣಾಮವಾಗಿ 1 ಮಗು,  ಇಬ್ಬರು ಹಿರಿಯ ನಾಗರಿಕರು ಸೇರಿದಂತೆ ಒಟ್ಟು ಎಂಟು ಜನ ಮೃತಪಟ್ಟಿದ್ದಾರೆ. ಇದು ದೊಡ್ಡ ಪ್ರಮಾಣದ ಅನಿಲ ದುರಂತ ವಾಗಿದ್ದು ಒಟ್ಟು 5000 ಜನರು ಇದರಿಂದ ಅಸ್ವಸ್ಥಗೊಂಡಿದ್ದಾರೆ.

ವಿಷಾನಿಲದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಒಬ್ಬ ಬಾವಿಗೆ ಬಿದ್ದು ಮೃತಪಟ್ಟಿರುತ್ತಾರೆಂದು ತಿಳಿದುಬಂದಿದೆ.

1984 ರ ಡಿಸೆಂಬರ್ 2 ರಂದು ನಡೆದ ಭೋಪಾಲ್ ಅನಿಲ ದುರಂತ ಇಡೀ ರೀತಿ ಮುಂಜಾನೆ ನಡೆಸಿತ್ತು. ಯೂನಿಯನ್ ಕಾರ್ಬೈಡ್ ಎಂಬ ಮಲ್ಟನ್ಯಾಷನಲ್ ಕಂಪನಿಯ ಚಿಮ್ಮ್ನಿ ಗಳ ಮೂಲಕ ಹೊರಬಂದ ಮಿಥೈಲ್ ಐಸೋಸಾಯನೇಟ್ ಎಂಬ ವಿಷಾನಿಲ ಒಟ್ಟು 3750 ಹೆಚ್ಚು ಜನರನ್ನು ಕೊಂದು ಹಾಕಿತ್ತು. ಹೆಚ್ಚಿನವರು ರಾತ್ರಿ ನಿದ್ದೆಯಲ್ಲಿ ಸತ್ತು ಬಿದ್ದಿದ್ದರು.

ಎಲ್ ಜಿ ಪಾಲಿಮರ್ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಸ್ಟಿರೀನ್ ಅನಿಲ ಸೋರಿಕೆ ಇದಾಗಿದೆ. ಅನಿಲ ಸೋರಿಕೆಯಿಂದಾಗಿ ಕಾರ್ಖಾನೆಯ ಒಳಗಿರುವ ನೌಕರರಿಗೆ ಅಂತಹ ತೊಂದರೆ ಉಂಟಾಗಿಲ್ಲ. ಆದರೆ ಸುತ್ತಲ ಪ್ರದೇಶದ ಜನರಲ್ಲಿ ಉಸಿರಾಟ ತೊಂದರೆ, ಕಣ್ಣು ಉರಿ ಕಾಣಿಸಿಕೊಂಡಿದೆ. ಆದುದರಿಂದ ಇದು ಸ್ಕ್ರಬ್ಬರ್ ಚಿಮ್ನಿ ಗಳ ಮೂಲಕ ವಾತಾವರಣಕ್ಕೆ ಹೊರಬಂದ ಗ್ಯಾಸ್ ಎನ್ನಲಾಗುತ್ತಿದೆ.

ಘಟನೆಯ ತೀವ್ರತೆಯನ್ನು ಮನಗಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ದುರಂತ ನಿರ್ವಹಣಾ ಸಂಸ್ಥೆಯ ಜತೆ ಮಾತನಾಡಿದ್ದಾರೆ.
ಅಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್  ಜಗನ್ ಮೋಹನ್ ರೆಡ್ಡಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಸದ್ಯದಲ್ಲೇ ಅವರು ವಿಶಾಖಪಟ್ಟಣಕ್ಕೆ ತೆರಳಲಿದ್ದಾರೆ. ಹಾಗೆಯೇ ಅಲ್ಲಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ಭೇಟಿ ನೀಡಿ ,ಗಾಯಾಳುಗಳನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave A Reply

Your email address will not be published.