ತಣ್ಣೀರು ಪಂತ ಗ್ರಾಮದಲ್ಲಿ ( ಕರಾಯ ದಲ್ಲಿ ) ಕೋರೋನಾ ಪಾಸಿಟಿವ್ ವ್ಯಕ್ತಿ ಪತ್ತೆ | ಜನತೆಗೆ ಸ್ಥೈರ್ಯ ತುಂಬಿದ ಶಾಸಕ ಶ್ರಿ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತಣ್ಣೀರು ಪಂತ ಗ್ರಾಮದ (ಕರಾಯದ) ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಅಲ್ಲಿನ ಪ್ರದೇಶಕ್ಕೆ ತೆರಳಿ ಆರೋಗ್ಯ ಇಲಾಖೆ, ಇತರ ಸರಕಾರಿ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.

ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಉಪಸ್ಥಿತರಿದ್ದರು.

ತಾಲೂಕಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ತಣ್ಣೀರುಪಂತ ಗ್ರಾಮದ ಜನತಾ ಕಾಲೋನಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮದ ಸುಮಾರು 150 ಜನರ ಪರೀಕ್ಷೆ ನಡೆಸಲಾಗಿದೆ. ರೋಗಿಯ ಸಂಪರ್ಕಕ್ಕೆ ಬಂದ 15 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ದೃಢೀಕೃತ ರೋಗಿಯ ಹೆತ್ತವರ ಸ್ಯಾಂಪಲ್ ಪಡೆದು ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ ಮತ್ತಾತನ ತಂದೆಯನ್ನು ವೆನ್ಲಾಕ್ ಆಸ್ಪತ್ರೆ ಮಂಗಳೂರಿನಲ್ಲಿ ದಾಖಲಿಸಲಾಗಿದೆ.

ಈ ಸಂಕಷ್ಟದ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ತಣ್ಣೀರುಪಂತ ಗ್ರಾಮಪಂಚಾಯತ್, ಅಧಿಕಾರಿಗಳು ನಿರಂತರವಾಗಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಇವರ ಈ ಸೇವಾಕಾರ್ಯಕ್ಕೆ ನನ್ನ ತಾಲ್ಲೂಕಿನ ಜನತೆಯ ಮನಪೂರ್ವಕವಾಗಿ ಆಶೀರ್ವಾದ ಹಾರೈಕೆ ಇವರೆಲ್ಲರ ಮೇಲಿರಲಿ.

ಎಂದು ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜಾ ಅವರು ನುಡಿದರು.

Leave A Reply

Your email address will not be published.