ಬಂಟ್ವಾಳದ ಅಬ್ಬೆಟ್ಟು | ಕೋರೋನಾ ರೋಗ ಭೀತಿಯಿಂದ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಬಂಟ್ವಾಳ ಮೇರಮಜಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ರೋಗ ಭೀತಿಯಿಂದ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಕೋರೋಣ ಭೀತಿಯಿಂದ ಸಾಯುತ್ತಿರುವುದು ಇದು – ಎರಡನೇ ಪ್ರಕರಣ. ವಾರದ ಹಿಂದೆ ಉಡುಪಿಯ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಬಂಟ್ವಾಳ ತಾಲೂಕಿನ ಅಬ್ಬೆಟ್ಟು ಎಂಬಲ್ಲಿಯ ನಿವಾಸಿಯಾಗಿದ್ದ ಸದಾಶಿವ ಶೆಟ್ಟಿ (ಪ್ರಾಯ 56 ವರ್ಷ) ಎಂಬವರು ಪೆಟ್ರೋಲ್ ಬ್ಯಾಂಕ್ ನಲ್ಲಿ ಕೆಲಸಮಾಡಿಕೊಂಡಿದ್ದರು. ಪೆಟ್ರೋಲ್ ಬ್ಯಾಂಕ್ ನಲ್ಲಿ ಅವರು ದಿನನಿತ್ಯ ನೂರಾರು ಜನರ ಜತೆ ವ್ಯವಹರಿಸುತ್ತಿದ್ದರು.
ಈಗ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ರೋಗವು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ತನಗೂ ತಗುಲಿರಬಹುದು ಎಂದು ಅವರು ಭಯಗೊಂಡಿದ್ದು, ಹಾಗೂ ತನಗೆ ಈ ರೋಗ ತಗುಲಿದ್ದಲ್ಲಿ ತನ್ನಿಂದಾಗಿ ಮನೆಯವರಿಗೂ ಹರಡಬಹುದೆಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನಾನು ದುಡ್ಡು ಕೊಡ್ತೇನೆ ತಗೋತೇನೆ, ಎಟಿಎಂ ಕಾರ್ಡು ಮುಟ್ಟುತ್ತೇನೆ, ಆದುದರಿಂದ ನನಗೆ ಕೋರೋನಾ ಬಂದರೆ ಎಂದು ಅವರು ಭಯ ಪಟ್ಟಿದ್ದರು.
ದಿನಾಂಕ 26-03-2020 ರಂದು ರಾತ್ರಿ 12.00 ಗಂಟೆಯಿಂದ ದಿನಾಂಕ 27-03-2020 ರಂದು ಬೆಳಿಗ್ಗೆ 6.00 ಗಂಟೆಯ ಮದ್ಯೆ ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.