ಬೆಳ್ಳಾರೆ | ಅಗತ್ಯ ಸೇವೆ ಹೊರತು ಪಡಿಸಿ ಪೂರ್ಣ ಬಂದ್

ಸುಳ್ಯ: ತಾಲೂಕಿನ ಪ್ರಮುಖ ಪೇಟೆಯಾಗಿರುವ ಬೆಳ್ಳಾರೆ ಪೇಟೆಯಲ್ಲಿ ಮಾ.23 ರಂದು ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ.

ಬೆಳ್ಳಾರೆ ಠಾಣೆಯ ವತಿಯಿಂದ ಎಸೈ ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ದ್ವನಿವರ್ದಕದ ಮೂಲಕ ಸೆಕ್ಷನ್144 ಜಾರಿಯಿರುವ ಕುರಿತು ಮಾಹಿತಿ ನೀಡಲಾಯಿತು.

ಕಾಣಿಯೂರು,ಸವಣೂರು ಗಳಲ್ಲಿ ಬೆಳಗಿನ ಹೊತ್ತು ಅಂಗಡಿ ಗಳು ಎಂದಿನಂತೆ ತೆರೆದುಕೊಂಡಿತ್ತು.ಬಳಿಕ ಪೊಲೀಸರ ಮನವಿಯಂತೆ ಬಂದ್ ಮಾಡಿದರು.

Leave A Reply

Your email address will not be published.