ಕೊರೋನಾ ವೈರಸ್ ಗೆ ಭಾಷೆ ಬರುತ್ತಾ ? । ಇಲ್ಲೊಬ್ಬರ ಪ್ರಕಾರ ” ಹೌದು ” !
ಪ್ರೀತಿಯ ಕೊರೋನಾ, ಹೇಗಿದ್ದರೂ ಬಂದಿದ್ದೀಯ. ಮೋದಿ ವಿರೋಧಿಗಳನ್ನು ಬಂದು ಭೇಟಿ ಆಗಿ ಹೋಗು. ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ – ಎಂಬ ಡಾ. ಸುರೇಶ ಪುತ್ತೂರಾಯರ ಸಂದೇಶವು ಫಾರ್ವರ್ಡ್ ಆಗಿ ರವಾನೆಯಾಗಿ ನನಗೆ ಬಂದಿದೆ. ಈ ರೀತಿಯ ಸಂದೇಶವು ಪ್ರಚೋದನೆಯಾಗಿದೆ
-ನರಿಮೊಗರು ಗ್ರಾಮದ ಪುರುಷರಕಟ್ಟೆ ಪಿ.ಬಿ.ಕೆ ಇಬ್ರಾಹಿಂ
ಅವರು ಮುಂದುವರಿದು, ಈ ಆರೋಪಿ ಪುತ್ತೂರಿನಲ್ಲಿ ವೈದ್ಯರಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲರಾಗಿದ್ದಾರೆ. ಅವರ ಈ ಸಂದೇಶ ಓದಿಕೊಂಡು ಅದರಿಂದ ಪ್ರಚೋದನೆಗೊಂಡು ಕೋಮುಗಲಭೆ ಉಂಟಾಗುವ ಸಾಧ್ಯತೆ ಇದೆ – ಎಂದು ನರಿಮೊಗರು ಗ್ರಾಮದ ಪುರುಷರಕಟ್ಟೆ ಪಿ.ಬಿ.ಕೆ ಇಬ್ರಾಹಿಂ ಎಂಬವರು ದೂರು ನೀಡಿದ್ದಾರೆ. ನಮ್ಮಬುದ್ದಿವಂತ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಕೊರೋನಾ ವೈರಸ್ ಗೆ ಭಾಷೆ ಬರುತ್ತಾ ?!
ಪ್ರಚೋದನೆ ಎನ್ನುವುದು ಟೂ ವೇ ಪ್ರೋಸೆಸ್. ಮೊದಲಿಗೆ ನಾನು ಹೇಳಿದ್ದು ನಿಮಗೆ ಅರ್ಥ ಆಗಬೇಕು. ನಿಮಗರ್ಥವಾಗದೆ ಇದ್ದರೂ ನಿಮ್ಮ ಸಹವರ್ತಿಗಳಿಗೆ, ಕುಟುಂಬಸ್ಥರಿಗೆ, ಅನುಯಾಯಿಗಳಿಗೆ ಮುಂತಾದವರಿಗೆ ಅರ್ಥ ಆಗಬೇಕು. ನಿಮಗೆ ಅಥವಾ ನಿಮ್ಮವರಿಗೆ ಅದರ ಅರ್ಥ ಆದ ಮೇಲೆ ಅದು ನಿಮ್ಮನ್ನು ನೋಯಿಸಬೇಕು. ಉದ್ರೇಕಿಸಬೇಕು. ಆದರೆ ಕೋರೋನಾ ವೈರಸ್ ಗೆ ಭಾಷೆ ಬರುತ್ತಾ ? ನಮ್ಮಸೀಮಿತ ಜ್ಞಾನದ ಪ್ರಕಾರ ಅದಕ್ಕೆ ಭಾಷೆ ಬರೋದಿಲ್ಲ ! ಮತ್ತೆ ಈ ಕೊರೋನಾ, ಅದು ಹೇಗೆ ಡಾ. ಸುರೇಶ ಪುತ್ತೂರಾಯರ ಸಂದೇಶ ಓದಿಕೊಂಡು ಮೋದಿ ವಿರೋಧಿಗಳಿಗೆ ಕಾಡುತ್ತದೆ ? ವ್ಯಂಗ್ಯವಾಗಿ, ಹಾಸ್ಯವಾಗಿ, ಮಾತಾಡಲೂ ಒಬ್ಬನಿಗೆ ಸ್ವಾತಂತ್ರ್ಯ ಇಲ್ಲವಾ ? ಇವರು ವಿಡಂಬನೆ ಮಾಡಿದ ಕೂಡಲೇ, ಕೊರೋನಾ ವೈರಸ್ ಎದ್ದು ಬಂದು ಮೋದಿ ವಿರೋಧಿಗಳನ್ನು ಮಾತ್ರ ಕಚ್ಚಿ ಬಿಡುತ್ತಾ ?
ಡಾ. ಸುರೇಶ ಪುತ್ತೂರಾಯರ ಸಂದೇಶ ಇಷ್ಟವಾಗದೇ ಇದ್ದರೆ, ಅವರು ವೈದ್ಯರಾಗಿ ಹೀಗೆ ಹೇಳಬಾರದಿತ್ತು, ( ವೈದ್ಯ ತಮಾಷೆ, ವ್ಯಂಗ್ಯ ಮಾಡಬಾರದು. ನಗಬಾರದು. ಯಾವಾಗಲೂ ಸೀರಿಯಸ್ ಆಗಿರಬೇಕು ಎನ್ನುವುದು ಭಾರತದಲ್ಲಿರುವ ಅಲಿಖಿತ ಕಾನೂನು ! ) ಎಂದು ನಿಮ್ಮ ಉತ್ತರ, ಅಸಹನೆಯನ್ನು ತೋಡಿಕೊಳ್ಳಿ.
ಈ ತಮಾಷೆ ಮಾಡಿದ ವಿಷಯವೂ ಕೋಮುಗಲಭೆ ಸೃಷ್ಟಿಸುತ್ತದೆ ಎಂದು ಹೇಗೆ ತಾನೇ ಇವರು ಆಲೋಚಿಸಲು ಸಾಧ್ಯ. ಇಂತಹ ಪುಟಾಣಿ ಮನಸ್ಸಿನ ಜನರಿಂದಲೇ ಇವತ್ತು ಒಡಕು ಮೂಡುತ್ತಿರುವುದು. ಇದರಿಂದ ಪ್ರಚೋದನೆ ಯಾವ ರೀತಿಯದ್ದು ಎಂಬುದೇ ಇಲ್ಲಿನ ಪ್ರಶ್ನೆ. ” ಕೋರೋನಾ ವೈರಸ್ ಗೆ ಭಾಷೆ ಬರುತ್ತಂತೆ ” ಅಂತ ಜನ ಕಾಮಿಡಿ ಮಾಡುತ್ತಿದ್ದಾರೆ.