ಮಾ.21 ಕಾಯ್ಮಣ ಮರಕ್ಕಡ ಕಲ್ಲಮಾಡ ಉಳ್ಳಾಕುಲು ಜಾತ್ರೋತ್ಸವ |ಮಾ.22 ಜನತಾ ಕರ್ಫ್ಯೂ ಹಿನ್ನೆಲೆ ,ಒಂದು ದಿನ ಮೊದಲು ಕಾರ್ಯಕ್ರಮ
ಕಾಣಿಯೂರು : ಶ್ರೀ ಕಾಯ್ಮಣ ಮರಕ್ಕಡ ಕಲ್ಲಮಾಡ ಉಳ್ಳಾಕುಲ ಜಾತ್ರೋತ್ಸವದ ಎಲ್ಯಾರ್ ದೈವದ ಹಾಗೂ ನಾಯರ್ ದೈವದ ನೋಮೋತ್ಸವು ಮಾ.೨೨ರ ರವಿವಾರ ನಡೆಯಬೇಕಿತ್ತು.
ಸರಕಾರದ ಆದೇಶದಂತೆ ಜನತಾ ಕರ್ಫ್ಯೂ ಇರುವ ಕಾರಣ ಜಾತ್ರೆ ನಡೆಸಲು ಅಡ್ಡಿ ಆಗಬಹುದು ಎಂಬ ಕಾರಣದಿಂದ ಎಲ್ಯಾರ್ ದೈವದ ಹಾಗೂ ನಾಯರ್ ದೈವದ ನೋಮೋತ್ಸವನ್ನು ಮಾ.೨೧ರಂದು ನಡೆಸುವುದಾಗಿ ಮಾ.೨೦ರಂದು ಅನುವಂಶೀಯ ಅರ್ಚಕರು, ಮುಖ್ಯ ಅರ್ಚಕರು, ಮುಕ್ತೇಶರರು, ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ನಾಲ್ಕು ಮನೆ ಮುಖ್ಯಸ್ಥರು ಹಾಗೂ ಶ್ರೀ ದೈವಗಳ ಪರಿಚಾರಕರು ನಡೆಸಿದ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಾ.೨೧ರಂದು ಬೆಳಿಗ್ಗೆ ೪ಕ್ಕೆ ಮಲ್ಲಾರ ದೈವದ ಹಾಗೂ ದೈಯಾರೆ ದೈವದ ನೇಮ, ಬೆಳಿಗ್ಗೆ ೧೧:೦೦ ಗಂಟೆಗೆ ಎಲ್ಯಾರ್ ದೈವದ ನೇಮ, ಮಧ್ಯಾಹ್ನ ೨ರಿಂದ ನಾಯರ್ ದೈವದ ನೇಮ, ಸಂಜೆ ೫:೦೦ ರಿಂದ ಅಂಙನ ಪಂಜುರ್ಲಿ ಹಾಗೂ ಗುಳಿಗ ದೈವದ ನೇಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.