ಪುತ್ತೂರು : ಯುವ ಮಂಡಲ ಅಭಿವೃದ್ದಿ ಕಾರ್ಯಗಾರ


ಪುತ್ತೂರು: ನೆಹರು ಯುವಕೇಂದ್ರ, ಮಂಗಳೂರು, ತಾಲೂಕು ಯುವಜನ ಒಕ್ಕೂಟ ಹಾಗೂ ನರಿಮೊಗರು ಪುರುಷರಕಟ್ಟೆ  ಪ್ರಖ್ಯಾತಿ ಯುವತಿ ಮಂಡಲ ಆಶ್ರಯದಲ್ಲಿ ಪುತ್ತೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. 
ಕಾರ್ಯಕ್ರಮವನ್ನು ಸಹಾಯಕ ಯುವ ಸಬಲೀಕರಣ ಕ್ರೀಡಾಽಕಾರಿ ಜಯರಾಮ ಗೌಡ ಉದ್ಘಾಟಿಸಿದರು.

 


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಲೋಹಿತ್ ಕುಮಾರ್ ಕಲ್ಮಂಜ ಮಾತನಾಡಿ,ಯುವ ಜನತೆ ಈ ದೇಶದ ಸಂಪತ್ತು. ಯುವ ಜನತೆ ನಡೆವ ಹಾದಿಯಲ್ಲೇ ಈ ದೇಶದ ಭವಿಷ್ಯ ನಿಂತಿದೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಮಂಡಲಗಳು ತೊಡಗಿಸಿಕೊಂಡಷ್ಟು ದೇಶ ಪ್ರಜ್ವಲಿಸಲು ಸಾಧ್ಯ. ಸಮಾಜದ ದುಷ್ಟ ಶಕ್ತಿಗಳನ್ನು ಹೊಡೆದಾಡಿಸಲು ಯುವಕರು ಶ್ರಮವಹಿಸಬೇಕು ಎಂದರು.


ನೆಹರು ಯುವ ಕೇಂದ್ರ ಮಂಗಳೂರು ಇದರ ಪ್ರತಿನಿಽ ಆದೇಶ್ ಶೆಟ್ಟಿ ಮಾತನಾಡಿ, ಯುವ ಮಂಡಲಗಳಿಗೆ ಸರಕಾರದಿಂದ ಸಾಕಷ್ಟು ಸವಲತ್ತುಗಳು ಇದ್ದು, ಅದನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಉತ್ತಮ ಸಮಾಜಕ್ಕೆ ಯುವ ಶಕ್ತಿಯೇ ಅಡಿಪಾಯವಾಗಿದೆ. ತಮ್ಮ ಅಮೂಲ್ಯ ಸಮಯವನ್ನು ಸಾಧ್ಯವಾದಷ್ಟು ಸಮಾಜದ ಏಳಿಗೆಗಾಗಿ ಮೀಸಲಿಡಿ ಎಂದರು. 
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಯುವ ಮಂಡಲಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.


ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಽಕಾರಿ ರಘುವೀರ್ ಸೂಟರ್ ಪೇಟೆ ಮೊದಲಾದವರು ಉಪಸ್ಥಿತರಿದ್ದರು. 
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು ಸ್ವಾಗತಿಸಿ,ವಂದಿಸಿದರು.

Leave A Reply

Your email address will not be published.