“ಜೇಷ್ಠತೆಯ ವಿಚಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ನಿಂದ ವಂಚಿತರಾಗುತ್ತಿದ್ದಾರೆ “| ಸದನದಲ್ಲಿ ಸಂಜೀವ ಮಠಂದೂರು ಕಳಕಳಿ
ಶಾಸಕ ಸಂಜೀವ ಮಠಂದೂರು ಅವರು ನಿನ್ನೆ ಮಂಡನೆಯಾಗಿ ಪಾಸ್ ಆದ ಶಿಕ್ಷಕರ ವರ್ಗಾವಣೆಯ ಕುರಿತ ವಿಧೇಯಕದ ಕುರಿತು ಸರ್ಕಾರಕ್ಕೆ ಪ್ರಮುಖ ಸಲಹೆಗಳನ್ನು ನೀಡಿದರು.
ಈ ಸಲಹೆಗಳು ಈಗ ಅಂಗೀಕಾರ ಆದ ಕಾನೂನಿನ ದುರುಪಯೋಗ ಆಗುವುದನ್ನು ತಪ್ಪಿಸುತ್ತದೆ.
ಮೊದಲಿಗೆ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶೈಕ್ಷಣಿಕ ಸಂಯೋಜಕ ಮುಂತಾದ ಒಂದಷ್ಟು ಹುದ್ದೆಗಳಿದ್ದು , ಅಲ್ಲಿಗೆ ಪಾಠ ಮಾಡಲು ಆಸಕ್ತಿ ಇಲ್ಲದ ವ್ಯಕ್ತಿಗಳು ಹೋಗಿ ಸೇರಿಕೊಳ್ಳುತ್ತಾರೆ. ಅವರು ಅಲ್ಲಿಯೇ ಹೋಗಿ ಶಾಶ್ವತ ವಾಗಿ ನೆಲೆ ನಿಲ್ಲುವ ಸಂಭವ ಇರುತ್ತದೆ.
– ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು
ಅಲ್ಲದೆ ಜೇಷ್ಠತೆಯ ವಿಚಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಪ್ರಮೋಷನ್ ನಿಂದ ವಂಚಿತರಾಗುತ್ತಿದ್ದಾರೆ. ಉದಾಹರಣೆ ಪತಿ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿದ್ದು, ಪತ್ನಿ ರಾಜ್ಯ ಸರ್ಕಾರದ ಶಿಕ್ಷಣ ಕ್ಷೇತ್ರದ ಉದ್ಯೋಗದಲ್ಲಿದ್ದು ಬೇರೆ ಊರಿನಲ್ಲಿದ್ದರೆ, ಆಗ ಜೇಷ್ಠತೆಯ ವಿಚಾರ ಈ ಕಾನೂನಿನಿಂದ ಪ್ರಮೋಷನ್ ವಿಚಾರದಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ. ಆದುದರಿಂದ ಅದಕ್ಕಾಗಿ ಮಸೂದೆಯಲ್ಲಿ ಸೂಕ್ತ ಬದಲಾವಣೆ ಮಾಡಬೇಕು.
– ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು