ಕೆಲದಿನಗಳ ಹಿಂದೆ ವಿದೇಶದಿಂದ ಪುತ್ತೂರಿಗೆ ಆಗಮಿಸಿದ್ದ ವ್ಯಕ್ತಿಯ ಮಾಹಿತಿ ಕೊಡಲು ಮನೆಯವರ ನಕಾರ | ಮನೆಯವರ ನಿಗೂಢ ವರ್ತನೆ !

ಕೋರೋಣ ವೈರಸ್ ಬಾಧೆಯ ಹಿನ್ನೆಲೆಯಲ್ಲಿ, ದೇಶದಿಂದ ಸ್ವದೇಶಕ್ಕೆ ಮರಳಿದವರ ಪಟ್ಟಿಯನ್ನು ತಯಾರಿಸಿ ಕೊಡುವಂತೆ ಸರಕಾರ ಆದೇಶಿಸಿತ್ತು. ಆ ನಿಟ್ಟಿನಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಪ್ರಾರಂಭಿಸಿದ್ದರು.

 

ಈ ನಡುವೆ, ಪುತ್ತೂರು ನಗರದ ಏಳ್ಮುಡಿಯಲ್ಲಿ ಹದಿನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ವಿದೇಶದಿಂದ ಬಂದ ಮಾಹಿತಿ ಆರೋಗ್ಯ ಇಲಾಖೆಗೆ ಲಭಿಸಿತ್ತು. ಹಾಗೆ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ತಂಡ ಏಳ್ಮುಡಿಯಲ್ಲಿರುವ ಆ ವ್ಯಕ್ತಿಯ ಮನೆಯನ್ನು ಸಂಪರ್ಕಿಸಿದಾಗ ಆ ವ್ಯಕ್ತಿಯ ಮನೆಯಲ್ಲಿ ಇರಲಿಲ್ಲ. ಆತ ಮೈಸೂರಿಗೆ ಹೊರಟು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿತ್ತು.

ಆತನ ಬಗ್ಗೆ ವಿಚಾರಿಸಲು ಆರೋಗ್ಯ ಇಲಾಖೆಯ ತಂಡ ಪ್ರಯತ್ನಿಸಿದಾಗ ಮನೆಯವರು ಸಹಕರಿಸದೆ ಮನೆ ಬಾಗಿಲು ಮುಚ್ಚಿ ಭದ್ರಪಡಿಸಿಕೊಂಡಿದ್ದರು. ವೈದ್ಯರು ಮತ್ತು ಇತರ ಸಿಬ್ಬಂದಿ ಎಷ್ಟೇ ವಿನಂತಿಸಿಕೊಂಡರೂ ಮನೆ ಬಾಗಿಲು ತೆಗೆಯಲಿಲ್ಲ. ನಾವು ನಿಮ್ಮ ಸಹಾಯಕ್ಕೆ ಬಂದವರು ಎಂದು ಹೇಳಿದರೂ ಮನೆಯವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಕೊನೆಗೆ ಅಲ್ಲಿ ಅರ್ಧ ಗಂಟೆ ಕಾದಿದ್ದು ಆನಂತರ ವೈದ್ಯಕೀಯ ತಂಡ ವಾಪಸಾಗಿದೆ. ಮತ್ತು ಘಟನೆಯ ಪೂರ್ತಿ ವಿವರವನ್ನು ಪುತ್ತೂರಿನ ಸಹಾಯಕ ಕಮಿಷನರ್ ಆದ ಡಾ. ಯತೀಶ್ ಉಳ್ಳಾಲ್ ಅವರಿಗೆ ವಿವರಿಸಿದೆ.
.

Leave A Reply

Your email address will not be published.