ಪಾಲ್ತಾಡು ವಿಷ್ಣುನಗರ: ಒತ್ತೆಕೋಲಕ್ಕೆ ಗೊನೆಮುಹೂರ್ತ : ಕೊರೊನಾ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ

 

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ  (252ನೇ ವರ್ಷದ) ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24,25ರಂದು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಗೊನೆಮುಹೂರ್ತ ನೆರವೇರಿಸಲಾಯಿತು.

ಈ ಸಂದರ್ಭ ದೇವರ ನಡೆಯಲ್ಲಿ ವಿಶ್ವಾದ್ಯಾಂತ ಭಯದ ವಾತಾವರನ ನಿರ್ಮಿಸಿರುವ ಕೊರೆನಾ ವೈರಸ್ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿ,ಕೊರೊನಾ ವೈರಸ್‌ನಿಂದ  ಶೀಘ್ರ ಮುಕ್ತಿ ದೊರಕುವಂತಾಗಲು ಪ್ರಾರ್ಥನೆ ಸಲ್ಲಿಸಲಾಯಿತು.
ವಿಷ್ಣುಮೂರ್ತಿ ದೈವದ ಪ್ರಧಾನ ಪಾತ್ರಿ ಕೃಷ್ಣ ಮಣಿಯಾಣಿ ಮೊಗಪ್ಪೆ ಗೊನೆಮುಹೂರ್ತ ನೆರವೇರಿಸಿದರು.


ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ಎನ್.ನವೀನ್ ರೈ ನಡುಮನೆ ಪಾಲ್ತಾಡು,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು,ವಿಲಾಸ್ ರೈ ಪಾಲ್ತಾಡು,ವಿನೋದ್ ರೈ ಪಾಲ್ತಾಡು,ಸುನೀಲ್ ರೈ ಪಾಲ್ತಾಡು ಮೊದಲಾದವರಿದ್ದರು.


ಒತ್ತೆಕೋಲದ ಅಂಗವಾಗಿ ಮಾ.24ರಂದು ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಹರಿಸೇವೆ ,ಸಂಜೆ ಪಾಲ್ತಾಡು ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆಯುವುದು,ರಾತ್ರಿ ಮೇಲೇರಿಗೆ ಬೆಂಕಿ ಕೊಡುವುದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ, ನಂತರ ಕುಳಿಚಟ್ಟು,ಮಾ.25ರಂದು ಪ್ರಾತಃಕಾಲ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ,ಪ್ರಸಾದ ವಿತರಣೆ,ಮುಳ್ಳು ಗುಳಿಗನ ಕೋಲ ನಡೆಯಲಿದೆ.

Leave A Reply

Your email address will not be published.