ಮುಕ್ಕೂರು ಪಿ.ಜಗನ್ನಾಥ ಪೂಜಾರಿ ಅವರಿಗೆ ಗಡಿನಾಡ ಧ್ವನಿ ಕ್ಷೀರಭೂಷಣ ರಾಜ್ಯಪ್ರಶಸ್ತಿ

Share the Article

ಸುಳ್ಯ : ಗಡಿನಾಡ ಧ್ವನಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಕ್ಷೀರ ಭೂಷಣ ರಾಜ್ಯ ಪ್ರಶಸ್ತಿಗೆ ಪ್ರಗತಿಪರ ಹೈನುಗಾರ ಪ್ರಸ್ತುತ ಅಲೆಕ್ಕಾಡಿಯಲ್ಲಿ ವಾಸವಿರುವ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಆಯ್ಕೆ ಯಾಗಿದ್ದಾರೆ.

ಹೈನುಗಾರಿಕಾ ಕ್ಷೇತ್ರದಲ್ಲಿನಾಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಏ.4 ರಂದು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಪ್ರಗತಿಪರ ಹೈನುಗಾರರಾಗಿರುವ ಇವರು ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ನಿರ್ದೇಶಕರಾಗಿದ್ದಾರೆ.ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಇವರು ಬೆಳ್ಳಾರೆ ಗ್ರಾ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.

ಇವರ ಕೃಷಿ ಕ್ಷೇತ್ರದ ಸಾಧನೆಗೆ ಈಗಾಗಲೇ ಹಲವು ಪ್ರಶಸ್ತಿ, ಸನ್ಮಾನಗಳು ದೊರೆತಿದೆ.

Leave A Reply

Your email address will not be published.