ಮಾ.18 ರಂದು ಸವಣೂರು ಮುಗೇರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸವಣೂರು : ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ೬ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ,ಪರಿವಾರ ದೈವಗಳ ಆರಾಧನಾ ಕೈಂಕರ್ಯಗಳು  ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ  ನೇತೃತ್ವದಲ್ಲಿ ಮಾ.25ಮತ್ತು 26ರಂದು ನಡೆಯಲಿದ್ದು  ಇದರ ಪೂರ್ವಭಾವಿಯಾಗಿ ಮಾ.18 ರಂದು ಬೆಳಿಗ್ಗೆ ಗೊನೆಮುಹೂರ್ತ ನಡೆಯಲಿದೆ.


ಮಾ.25ರಂದು  ಬೆಳಿಗ್ಗೆ ಭಕ್ತಾಽಗಳಿಂದ  ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಽಗಳಿಂದ ಕ್ಷೇತ್ರ ಸ್ವಚ್ಚತೆ,ಅಲಂಕಾರ ಸೇವೆ,ಸಂಜೆ ತಂತ್ರಿಗಳ ಆಗಮನ ,ಪೂರ್ಣಕುಂಭ ಸ್ವಾಗತ,ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಹೋಮ,ವಾಸ್ತು ಬಲಿ,ರಾತ್ರಿ ಪೂಜೆ ನಡೆಯಲಿದೆ.
ಮಾ.೨೬ರಂದು ಪ್ರಾತಃಕಾಲ ನಿತ್ಯಪೂಜೆ,ಮಹಾಗಣಪತಿ ಹೋಮ,ಬಿಂಬ ಶುದ್ದಿ,ಕಲಶಪೂಜೆ,ಮದ್ಯಾಹ್ನ ಕಲಶಾಭಿಷೇಕ ,ದೇವರುಗಳ ವಾರ್ಷಿಕ ಪ್ರತಿಷ್ಠಾ ದಿನದ ಪೂಜೆ,ಕಲಶಾಭಿಷೇಕ,ದೈವಗಳಿಗೆ ತಂಬಿಲ,ಮಹಾಪೂಜೆ,ಪ್ರಸಾದ ವಿತರಣೆ,ಪಲ್ಲ ಪೂಜೆ,ಅನ್ನ ಸಂತರ್ಪಣೆ ನಡೆಯಲಿದೆ.


ಸಂಜೆ 6ರಿಂದ ದೀಪಾರಾಧನೆ,ತಾಯುಬಕಂ,ಮಹಾಪೂಜೆ.ಶ್ರೀ ದೇವರ ಬಲಿ ಹೊರಟುನ ಉತ್ಸವ,ಭೂತ ಬಲಿ ,ವಸಂತ ಕಟ್ಟೆ ಪೂಜೆ,ಸುಡುಮದ್ದು ಪ್ರದರ್ಶನ,ದರ್ಶನ ಬಲಿ,ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ,ವೈಽಕ ಮಂತ್ರಾಕ್ಷತೆ,ಅನ್ನಸಂತರ್ಪಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.

Leave A Reply

Your email address will not be published.