ಮಾ.15 16 | ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೆ

ನರಿಮೊಗರು :ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯ ದೇವಸ್ಥಾನವಾಗಿರುವ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಮಾ.15 ಮತ್ತು ಮಾ.16 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಮಾ.15 ರಂದು ಬೆಳಗ್ಗೆ 8-00ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ಥಿ ಪುಣ್ಯಹವಾಚನ, ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಹಾಗೂ ಬೆಳಗ್ಗೆ 11-30 ಕ್ಕೆ ಶ್ರೀ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಲಿದೆ.

ಸಂಜೆ ವೀರಮಂಗಲ ಕೃಷ್ಣ ಕಲಾ ಕೇಂದ್ರದ ವತಿಯಿಂದ ಕಾರ್ಣಿಕೊದಪ್ಪೆ ಕಲ್ಲುರ್ಟಿ ನೃತ್ಯರೂಪಕ ನಡೆಯಲಿದೆ.ರಾತ್ರಿ ಮಹಾಪೂಜೆ,ಅನ್ನಸಂತರ್ಪಣೆ ಬಳಿಕ ಶ್ರೀದೇವರ ಬಲಿ ಹೊರಟು ಉತ್ಸವ ,ಸುಡುಮದ್ದು ಪ್ರದರ್ಶನ,ವಸಂತ ಕಟ್ಟೆ ಪೂಜೆ ನಡೆಯಲಿದೆ.

ಮಾ.16ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಂತರ ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಶ್ರೀ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ , ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ,ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೆ.ಸುಂದರ ಗೌಡ ನಡುಬೈಲು ತಿಳಿಸಿದ್ದಾರೆ.

Leave A Reply

Your email address will not be published.