ಎ. 7- 8: ಕುಂಡಡ್ಕ ಶ್ರೀ ಮೊಗೇರ ದೈವ, ಕೊರಗಜ್ಜ ಸಾನ್ನಿಧ್ಯ ಬ್ರಹ್ಮಕಲಶ, ನೇಮ
ಬೆಳ್ಳಾರೆ: ಪೆರುವಾಜೆ ಗ್ರಾಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನ್ನಿಧ್ಯದ ಬ್ರಹ್ಮಕಲಶ ಮತ್ತು ನೇಮವು ಎ. 7 ಮತ್ತು 8 ರಂದು ನಡೆಯಲಿದೆ ಎಂದು ಜೀರ್ಣೋದ್ಧಾಾರ ಸಮಿತಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.
ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳ್ಳಾರೆ-ಸವಣೂರು-ಪುತ್ತೂರು ರಸ್ತೆಯಲ್ಲಿ ಬೆಳ್ಳಾರೆ ಹಾಗೂ ಸವಣೂರಿನ ಮಧ್ಯಭಾಗದ ಕುಂಡಡ್ಕದಲ್ಲಿ ಈ ದೈವಸ್ಥಾನ ಇದ್ದು, ಅತ್ಯಂತ ಕಾರಣಿಕ ನೆಲೆಯಲ್ಲಿ ಶತಮಾನಗಳಿಂದ ನಂಬಿದ ಭಕ್ತ ವೃಂದಕ್ಕೆ ಇಂಬು ನೀಡಿ ಅವರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತಿದೆ. ಹಲವು ದಶಕಗಳ ಬಳಿಕ ಈ ಕ್ಷೇತ್ರದ ಪುನರುತ್ಥಾನ ಕಾರ್ಯ ನಡೆದಿದೆ ಎಂದರು.
ಎ. 7 ರಂದು ಬೆಳಗ್ಗೆ ಹಸುರುವಾಣಿ ಸಂಗ್ರಹ, ಸಂಜೆ ತಂತ್ರಿಗಳ ಆಗಮನ, ಬಳಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಎ. 8ರಂದು ಬೆಳಗ್ಗೆ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ.
ಬೆಳಂದೂರು ವಿಷ್ಣು ಪ್ರಿಯಾ ಭಜನ ಮಂಡಳಿ ವತಿಯಿಂದ ಭಜನೆ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಸಭೆಯಲ್ಲಿ ಶಾಸಕ ಅಂಗಾರ ಅಧ್ಯಕ್ಷತೆ ವಹಿಸಲಿದ್ದಾಾರೆ. ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾಾರೆ. ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಪೆರುವಾಜೆ ಗ್ರಾ.ಪಂ. ಅಧ್ಯಕ್ಷೆ ಅನಸೂಯಾ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಎಂ.ಕೆ. ಬಾಲಚಂದ್ರ ರಾವ್, ಶ್ರೀ ಧರ್ಮಸ್ಥಳ ಗ್ರಾ.ಯೋ. ಯೋಜನಾಧಿಕಾರಿ ಸಂತೋಷ್ ಕುಮಾರ್ ಭಾಗವಹಿಸಲಿದ್ದಾರೆ.
ಎ. 8 ರಂದು ಸಂಜೆ ದೈವಗಳ ಭಂಡಾರ ತೆಗೆದು, ಕಲ್ಲುರ್ಟಿ, ಅಗ್ನಿ ಗುಳಿಗ, ನನಿಕ, ಮೊಗೇರ, ತನ್ನಿಮಾನಿಗ, ಪಂಜುರ್ಲಿ, ಸ್ವಾಮಿ ಕೊರಗಜ್ಜ ದೈವಗಳ ನೇಮ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಸಂಚಾಲಕ ಉಮೇಶ್ ಕೆಎಂಬಿ, ಕಾರ್ಯದರ್ಶಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಆರ್ಥಿಕ ಸಮಿತಿಯ ಮಂಜಪ್ಪ ರೈ ಬೆಳ್ಳಾಾರೆ, ಕೋಶಾಧಿಕಾರಿ ಕುಶಾಲಪ್ಪ ಗೌಡ ಪೆರುವಾಜೆ, ಆನುವಂಶಿಕ ಮೊಕ್ತೇಸರ ಗುರುವ ಕುಂಡಡ್ಕ, ಆಡಳಿತ ಸಮಿತಿ ಅಧ್ಯಕ್ಷ ಚನಿಯ ಕುಂಡಡ್ಕ, ಗೌರವ ಸಲಹೆಗಾರರಾದ ಗಣೇಶ್ ಶೆಟ್ಟಿ ಕುಂಜಾಡಿ, ಸುಧಾಕರ ರೈ ಕುಂಜಾಡಿ, ರಾಮಚಂದ್ರ ಕೋಡಿಬೈಲು, ಸಂಜೀವ ಗೌಡ ಬೈಲಂಗಡಿ, ವಿಜಯ ಕುಮಾರ್ ರೈ ಪೆರುವೋಡಿ, ದಾಮೋದರ ಗೌಡ ತೋಟ ಮರಿಕೇಯಿ, ನಾರಾಯಣ ಕೊಂಡೆಪ್ಪಾಡಿ, ದಯಾನಂದ ರೈ ಕನ್ನೆಜಾಲು, ಲಿಂಗಪ್ಪ ಗೌಡ ಕುಂಡಡ್ಕ, ಪುರುಷೋತ್ತಮ ಕುಂಡಡ್ಕ, ಜಯಂತ ಕುಂಡಡ್ಕ, ವಾಸು ಕುಂಡಡ್ಕ, ಕೃಷ್ಣಪ್ಪ ಕುಂಡಡ್ಕ, ದಿವಾಕರ ಬೀರುಸಾಗು, ಕಿರಣ್ ಚಾಮುಂಡಿಮೂಲೆ, ಮುದರು ಕುಂಡಡ್ಕ ಉಪಸ್ಥಿತರಿದ್ದರು