ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ
ಪುತ್ತೂರು : ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಬದಲು ನಮ್ಮಲ್ಲೇ ದರ್ಶನ ಪಡೆಯುವಂತಾಗಲು ಪುತ್ತೂರು ತಾಲೂಕಿನ ಕೈಕಾರ ಶಾಲಾ ಕ್ರೀಡಾಂಗಣ “ಶೇಷಾದ್ರಿ “ಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರ ಇದರ ವತಿಯಿಂದ ಮಾ.14 ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ದತೆ ಪೂರ್ಣಗೊಂಡಿದೆ.
ಮಾ.14 ರ ಶನಿವಾರ ಸಾಯಂಕಾಲ ಗಂಟೆ 6 ರಿಂದ ರಾತ್ರಿ10 ರ ತನಕ ಗೋಧೂಳಿ ಮುಹೂರ್ತದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಭಗವದ್ಭಕ್ತರನ್ನು ಸ್ವಾಗತಿಸಲು ಆಕರ್ಷಕವಾದ ಸಭಾಂಗಣ , ಬಂಟಿಂಗ್ಸ್, ಫ್ಲೆಕ್ಸ್, ಕೇಸರಿ ಪತಾಕೆ ಗಳನ್ನೂ ಅಳವಡಿಸುವ ಕಾರ್ಯದಲ್ಲಿ ಈ ಧಾರ್ಮಿಕ ಕಾರ್ಯಕ್ರಮದ ಆಯೋಜಕರಾದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರದ ಸದಸ್ಯರು ಹಾಗೂ ಕರಸೇವಕರು ಹಗಲಿರುಳು ದುಡಿಯುತಿದ್ದಾರೆ.
ಲೋಕ ಸುಬಿಕ್ಷೆಗೆ
ಶ್ರೀ ಶ್ರೀನಿವಾಸನ ಕಲ್ಯಾಣದಿಂದ ಲೋಕ ಕಲ್ಯಾಣವಾಗುತ್ತದೆ. ಸಂಪತ್ತು ,ಅದೃಷ್ಟಗಳ ಅನುಗ್ರಹ ವಾಗುತ್ತದ.
ಲೋಕ ಸುಭಿಕ್ಷೆಗೆ ಮಳೆ ಬೆಳೆ ಆನಂದ ತುಂಬಿ ಧನ್ಯತೆ ತುಳುಕಲು ಶ್ರೀನಿವಾಸ ಪದ್ಮಾವತಿಯ ಕಲ್ಯಾಣ ಎನ್ನುವ ಪ್ರತೀತಿ ಆಸ್ತಿಕ ಹಿಂದೂಗಳಲ್ಲಿ ಇದೆ.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತಿ ನಿತ್ಯ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ವಿಶೇಷ ಸೇವೆಯನ್ನು ಕಣ್ತುಂಬಿಸಿಕೊಳ್ಳಲು ರೂ 1,000 ಪಾವತಿಸಿ 2 ವರ್ಷ ಮುಂಚಿತವಾಗಿಯೇ ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ..
ಅಲ್ಲಿ ದಿನ ಒಂದಕ್ಕೆ ಕೇವಲ 1,200 ಜನರಿಗೆ ಮಾತ್ರ ಪ್ರವೇಶ. ತಿರುಪತಿಯಲ್ಲಿ ಧಾರ್ಮಿಕ ಪೂಜಾ ವಿಧಿಗಳನ್ನು ಆಚರಿಸುವ ಅರ್ಚಕರು, ವಿದ್ವಾಂಸರು ಇಲ್ಲೂ ಆ ವಿಧಿಗಳನ್ನು ನೆರೆವೇರಿಸುವುದು ವಿಶೇಷ.
ಸಮಗ್ರ ವಿವಾಹ ವಿಧಿ
ಈ ಕಾರ್ಯಕ್ರಮದಲ್ಲಿ ಸಮಗ್ರ ವಿವಾಹ ವಿಧಿಯೂ ನೆರೆವೇರುತ್ತಾದೆ. ಪ್ರತಿ ಅಂಗವೂ ವಿಸ್ತಾರವಾಗಿ ಧಾರ್ಮಿಕ ಸೂಚನೆಯಂತೆ ನಡೆಯಲಿದೆ. ಗಣಪತಿ ಪೂಜೆಯಿಂದ ತೊಡಗಿ, ಮಾಂಗಲ್ಯ ಧಾರಣೆ ಹೀಗೆ ಮುಂದುವರಿದು ಸಮಾಪನದವರೆಗೂ ಸರ್ವ ವಿಧಿಗಳಲ್ಲಿ ಮಂತ್ರ –ದಾಸರ ಹಾಡುಗಳ ಸಮ್ಮಿಲನದಿಂದ ಸಂಪನ್ನಗೊಳ್ಳುತ್ತಾದೆ . ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಅವರಿಂದ ಕಾರ್ಯಕ್ರಮಕ್ಕೆ ಸ್ವಾಗತ
ಭವ್ಯ ಶೋಭಾಯಾತ್ರೆ
ಸಾವಿರ ಮನಸ್ಸುಗಳ ತುಮುಲಕ್ಕೆ ಸಾಂತ್ವನ ಕಾಣಲು , ಊರಿನಲ್ಲೇ ತಿರುಪತಿಯ ಶ್ರೀಪತಿಯನ್ನು ಶ್ರೀ ಶ್ರೀನಿವಾಸನಾಗಿ ಕಂಡು ದನ್ಯರಾಗಲು ಶ್ರೀ ಶ್ರೀನಿವಾಸ ಪದ್ಮಾವತಿಯರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಪುಳಕಿತರಾಗಲು ಈ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೊಂಡಿದೆ.
ಭವ್ಯ ಶೋಭಾಯಾತ್ರೆಯೊಂದಿಗೆ ತಿರುಪತಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಕಾರ್ಯಕ್ರಮಕ್ಕೆ ಶೇಷಾದ್ರಿ’ ಕೈಕಾರ ಶಾಲಾ ಕ್ರೀಡಾಂಗಣಕ್ಕೆ ಕರೆತರಲಾಗುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ
ರಂಗ್‌ದ ರಾಜೆ ಸುಂದರ ರೈ ಮಂದಾರ