ಕಮಲದ ಹೊಡೆತಕ್ಕೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಕನಲಿ ಹೋಗಿದ್ದಾರೆ : ವರ್ಕೌಟ್ ಆಗುತ್ತಾ 20 ಮಂತ್ರಿಗಳ ರಾಜೀನಾಮೆ ತಂತ್ರ ?

ಮಧ್ಯಪ್ರದೇಶ ಸರಕಾರ ಹುಟ್ಟುವುದಕ್ಕೆ ಮೊದಲೇ ಎಲೆಕ್ಷನ್ ಸಮಯದಲ್ಲಿಯೆ ಈಗಿನ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಅವರ ಆತ್ಮೀಯ ದಿಗ್ವಿಜಯಸಿಂಗ್ ಇವರ ಬಗ್ಗೆ ಜ್ಯೋತಿರಾಧಿತ್ಯ ಸಿಂಧ್ಯ ಅಸಮಾಧಾನ ಹೊಂದಿದ್ದರು. ಕಮಲ್ನಾಥ್ ಮತ್ತು ದಿಗ್ವಿಜಯಸಿಂಗ್ ಹುನ್ನಾರ ದಿಂದಲೇ ಜ್ಯೋತಿರಾಧಿತ್ಯ ಸಿಂಧ್ಯ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದು ಎಂಬ ಭಾವನೆ ಅವರಲ್ಲಿ ಬಲವಾಗಿ ಬೇರೂರಿತ್ತು.

ಅಲ್ಲದೆ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲಿಗ ಶಾಸಕರ ಯಾವುದೇ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಮಲ್ನಾಥ್ ವಿಫಲರಾಗಿದ್ದರು. ಪದೇಪದೇ ಜ್ಯೋತಿರಾಧಿತ್ಯ ಬೆಂಬಲಿಗ ಶಾಸಕರುಗಳನ್ನು ನಿರ್ಲಕ್ಷಿಸಲಾಗಿತ್ತು. ಆದ್ದರಿಂದ ಸಣ್ಣಗೆ ಭುಗಿಲೆದ್ದಿದ್ದ ಭಿನ್ನಮತ ಈಗ ಸ್ಪೋಟಗೊಂಡಿದೆ. ಕ್ಕಾಂಗ್ರೆಸ್ಸಿನ 17 ಜನ ಜ್ಯೋತಿರಾಧಿತ್ಯ ಸಿಂಧ್ಯ ನಿಷ್ಠ ಶಾಸಕರುಗಳು ಸುರಕ್ಷಿತ (!!) ಸ್ಥಳವಾದ ಬೆಂಗಳೂರಿಗೆ ಆಗಮಿಸಿದ್ದಾರೆ.

ಏಕೆಂದರೆ ಇಲ್ಲಿರುವುದು ಬಿಜೆಪಿ ಸರಕಾರ. ಅಷ್ಟೇ ಅಲ್ಲ, ಇಲ್ಲಿರುವುದು ಆಪರೇಷನ್ ಕಮಲದ ರೂವಾರಿ ಮತ್ತು ಮಾಸ್ಟರ್ ಪ್ಲಾನರ್, ಒನ್ ಅಂಡ್ ಓನ್ಲಿ ಯಡಿಯೂರಪ್ಪ !! ಅಂತ ಅನುಭವಿಯ ಭೀಷ್ಮ ಮುಷ್ಠಿಯಿಂದ ತಪ್ಪಿಸಿಕೊಂಡು ಸುಲಭವಾಗಿ ಹೋಗಲು ಆಗುವುದಿಲ್ಲ ಎಂಬುದು ಕಳೆದ ಬಾರಿ ಕರ್ನಾಟಕದಲ್ಲಿ 17 ಜನ ಎಂಎಲ್ಎಗಳನ್ನು ರಾಜಿನಾಮೆ ಕೊಡಿಸಿ, ಕಾಂಗ್ರೆಸ್ ನ ಭಗೀರಥ ಪ್ರಯತ್ನದ ನಡುವೆಯೂ ಬಿಜೆಪಿ ಸರಕಾರವನ್ನು ಕಟ್ಟಿಕೊಳ್ಳಲು ಯಡಿಯೂರಪ್ಪ ಸಮರ್ಥರಾಗಿದ್ದರು !

ಹೀಗೆ ಬಹುಮತ ಕಳೆದುಕೊಂಡ ಕಮಲ್ ನಾಥ್ ಅವರು ನಿನ್ನೆ ರಾತ್ರಿ ತನ್ನ ಎಲ್ಲಾ 20 ಜನ ಮಂತ್ರಿಗಳ ಕೈಯಿಂದ ರಾಜೀನಾಮೆ ಕೊಡಿಸಿದ್ದಾರೆ. ಮತ್ತೆ ಸಂಪುಟ ಪುನಾರಚನೆ ಮಾಡುವ ಮೂಲಕ ಅತೃಪ್ತ ಶಾಸಕರುಗಳಿಗೆ ಮಂತ್ರಿ ಭಾಗ್ಯ ಅವಕಾಶ ಕಲ್ಪಿಸುವ ಆಮಿಷ ಆ 22 ಜನ ಮಂತ್ರಿಗಳ ರಾಜೀನಾಮೆಯ ಹಿಂದಿನ ಉದ್ದೇಶ. ಈ ತಂತ್ರ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಬಿಜೆಪಿಯ ಹಿರಿಯ ತಲೆಮಾರಿನ ನಾಯಕಿ ವಿಜಯರಾಜೇ ಸಿಂಧಿಯಾ ಅವರ ಮೊಮ್ಮಗ ಜ್ಯೋತಿರಾಧಿತ್ಯ ಸಿಂಧ್ಯ ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಮಧ್ಯಪ್ರದೇಶದಲ್ಲಿ ರಾಜಕೀಯ ಅತಂತ್ರತೆ ಇದ್ದು ಇನ್ನೂ ಕೆಲವು ದಿನಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ಲಕ್ಷಣ ಗೋಚರಿಸುತ್ತಿದೆ.


Leave A Reply

Your email address will not be published.