35 ವರ್ಷದ ಸೇಡು ಇಂದಿಗೆ ತೀರಿತು | ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿಗೆ

ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರೊಂದಿಗೆ ಸೇರಿಕೊಂಡು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದ ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಆ ಮೂಲಕ ಕಾಲಚಕ್ರ ಒಂದು ದೊಡ್ಡ ಸುತ್ತು ತಿರುಗಿದೆ. 35 ವರ್ಷಗಳ ಹಿಂದೆ ಒಂದು ರಾಜ ಕುಟುಂಬವನ್ನು ಒಡೆದು, ಬಿಜೆಪಿಯನ್ನು ಘಾಸಿಗೊಳಿಸಿದ್ದ ಕಾಂಗ್ರೆಸ್ಸಿಗೆ ಇಷ್ಟು ವರ್ಷಗಳ ನಂತರ ಕಾದು ಕಾದು ಹೊಡೆತ ನೀಡಿದೆ ಬಿಜೆಪಿ.

ದ್ವೇಷದ ಇತಿಹಾಸ

ಇದು ನಿಜಕ್ಕೂ ಬಿಜೆಪಿಗೆ ದೊಡ್ಡ ಗೆಲುವು. ಗೆಲುವು ಅನ್ನುವುದಕ್ಕಿಂತ ಒಂದು ದೀರ್ಘ ಮುಯ್ಯಿ, ಒಂದು ಸುದೀರ್ಘ ಕಾಲದ ದ್ವೇಷ ತೀರಿಸಿಕೊಂಡ ತೃಪ್ತಿ ಬಿಜೆಪಿಯದು. ಬಿಜೆಪಿಯ ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ವಾಜಪೇಯಿ ಯವರ ಸಮಕಾಲೀನ ವ್ಯಕ್ತಿಯಾಗಿದ್ದವರು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರು.

ಅವರಿಗೆ ಮೂವರು ಮಕ್ಕಳು. ವಸುಂಧರಾ ರಾಜೇ ಸಿಂಧಿಯಾ, ಯಶೋಧರ ರಾಜೇ ಸಿಂಧಿಯಾ ಎಂಬಿಬ್ಬರು ಹೆಣ್ಣುಮಕ್ಕಳು ಮತ್ತು ಮೂರನೇಯವರು ಮಾಧವರಾವ್ ಸಿಂಧಿಯಾ. ಮೊದಲ ಇಬ್ಬರು ಮಕ್ಕಳೂ ಅಮ್ಮನಿಗೆ ವಿಧೇಯರಾಗಿ ಬಿಜೆಪಿಯಲ್ಲಿ ಇದ್ದು ಬೆಳೆದು, ಒಬ್ಬಾಕೆ ಯಶೋಧರರಾಜೇ ಸಿಂಧಿಯಾ ರಾಜಸ್ತಾನದ ಮುಖ್ಯಮಂತ್ರಿಯಾದರೆ, ಮತ್ತೊಬ್ಬರು ಮಧ್ಯಪ್ರದೇಶದಲ್ಲಿ ಮಂತ್ರಿಯಾಗಿದ್ದರು.

ಆದರೆ ಮಗ ಮಾಧವ ರಾವ್ ಸಿಂಧಿಯಾ ಅಮ್ಮನನ್ನು ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದರು. ಅವರು 2001 ರಲ್ಲಿ ವಿಮಾನ ದುರ್ಘಟನೆಯಲ್ಲಿ ಸಾಯುವವರೆಗೂ ಕಾಂಗ್ರೆಸ್ ನಲ್ಲೇ ಇದ್ದರು. ಎಷ್ಟೇ ಪ್ರಯತ್ನಪಟ್ಟರೂ ಅವರನ್ನು ಬಿಜೆಪಿಗೆ ಕರೆತರಲು ಆಗಿರಲಿಲ್ಲ.

ಆದರೆ ಅವರ ಮಗ, ತನ್ನ ರಾಜಕೀಯ ಜೀವನವನ್ನು ಅಪ್ಪನ ನೆರಳಿನಲ್ಲಿ ಕಾಂಗ್ರೆಸ್ಸಿನಲ್ಲಿಯೇ ಪ್ರಾರಂಭಿಸಿದರೂ ಇತ್ತೀಚೆಗೆ ಕಾಂಗ್ರೆಸ್ಸಿನ ಹಲವು ಮುಖಂಡರೊಂದಿಗೆ ಅವರ ಸಂಬಂಧ ಹಳಸಿ ಹೋಗಿತ್ತು. ಇಂಥದೊಂದು ಅವಕಾಶಕ್ಕಾಗಿ ಬಿಜೆಪಿ ಸರಿಸುಮಾರು 35 ವರ್ಷ ಕಾದು ಕುಳಿತಿತ್ತು. ಅಂಥ ಅವಕಾಶ ಇವತ್ತು ಬಿಜೆಪಿಗೆ ಒದಗಿ ಬಂದಿದೆ. ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಜ್ಯೋತಿರಾಧಿತ್ಯ ಸಿಂಧ್ಯ ಇವತ್ತು ಕಾಂಗ್ರೆಸ್ ನಿಂದ ಹೊರ ಬರುವುದರೊಂದಿಗೆ ಮತ್ತೊಂದು ರಾಜಕೀಯ ಚಕ್ರಕ್ಕೆ ಜೀವ ಬಂದಿದೆ. ಇವತ್ತಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಗದ್ದುಗೆಯನ್ನು ಜ್ಯೋತಿರಾಧಿತ್ಯ ಸಿಂಧ್ಯ ಏರುವುದು ಖಚಿತ ಎನಿಸುತ್ತದೆ.

Leave A Reply

Your email address will not be published.