ಪುತ್ತೂರು | ಆಲಡ್ಕ ಶ್ರೀ ಸದಾಶಿವ ದೇವಸ್ಥಾನ : ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.25- ಮಾ.30

ಶ್ರೀ ಸದಾಶಿವ ದೇವಸ್ಥಾನ ಆಲಡ್ಕ ಮಂಡೂರಿನಲ್ಲಿ ದಿನಾಂಕ 25-03-2020 ನೇ ಬುಧವಾರದಿಂದ ದಿನಾಂಕ 30-03-2020 ನೇ ಸೋಮವಾರದ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜಶ್ರೀ ಪದ್ಮಭೂಷಣ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ವಿವಿಧ ವೈದಿಕ, ತಾಂತ್ರಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಇಂದು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದಿನಾಂಕ 25 ರಂದು ಹಸಿರುವಾಣಿ ಮೆರವಣಿಗೆ ನಡೆಯಲಿದ್ದು, ಕೆದಂಬಾಡಿ ಗ್ರಾಮದ ಗ್ರಾಮಸ್ಥರು ಬೆಳಗ್ಗೆ 10-00 ತಿಂಗಳಾಡಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಸೇರಿ, ಮತ್ತು ಮುಂಡೂರು ಗ್ರಾಮದ ಗ್ರಾಮಸ್ಥರು ಬೆಳಗ್ಗೆ 10-15 ಕ್ಕೆ ಮುಂಡೂರು ಗ್ರಾಮ ಪಂಚಾಯತ್ ವಠಾರ ದಲ್ಲಿ ಸೇರಿ, ಎರಡು ಕಡೆಯಿಂದ ಶ್ರೀ ಕ್ಷೇತ್ರಕ್ಕೆ ತಲುಪುವುದು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಸುರೇಶ್ ಕಣ್ಣಾರಾಯ, ಕಾರ್ಯದರ್ಶಿ ಅರುಣ್ ಕುಮಾರ್ ಆಳ್ವ ಬೋಳೋಡಿ, ಅಧ್ಯಕ್ಷರಾದ ಬೋಳೋಡಿಗುತ್ತು ಚಂದ್ರಹಾಸ ರೈ ಉಪಸ್ಥಿತರಿದ್ದರು.

https://hosakannada.com/2020/03/08/happy-womans-day/

Leave A Reply

Your email address will not be published.